ಆಧಾರ್ ಗುತ್ತಿಗೆ ಬಗ್ಗೆ ತಪ್ಪು ಮಾಹಿತಿ: ಆರ್.ಟಿ.ಐ ಕಾರ್ಯಕರ್ತನ ವಿರುದ್ಧ ಯುಐಡಿಐ ಆರೋಪ

ಆಧಾರ್ ಗುತ್ತಿಗೆ ಬಗ್ಗೆ ತಪ್ಪು ಮಾಹಿತಿ: ಆರ್.ಟಿ.ಐ ಕಾರ್ಯಕರ್ತನ ವಿರುದ್ಧ ಯುಐಡಿಐ ಆರೋಪ

ಆಧಾರ್ ಕಾರ್ಡ್ ಯೋಜನೆಯ ಗುತ್ತಿಗೆಯ ಬಗ್ಗೆ ಪಡೆದ ಆರ್.ಟಿ.ಐ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿರುವುದಕ್ಕೆ ಯುಐಡಿಐ ಆರ್.ಟಿ.ಐ ಕಾರ್ಯಕರ್ತನ ವಿರುದ್ಧ ಆಕ್ರೋಶಗೊಂಡಿದೆ.

ಮುಂಬೈ: ಆಧಾರ್ ಕಾರ್ಡ್ ಯೋಜನೆಯ ಗುತ್ತಿಗೆಯ ಬಗ್ಗೆ ಪಡೆದ ಆರ್.ಟಿ.ಐ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿರುವುದಕ್ಕೆ ಯುಐಡಿಐ ಆರ್.ಟಿ.ಐ ಕಾರ್ಯಕರ್ತನ ವಿರುದ್ಧ ಆಕ್ರೋಶಗೊಂಡಿದೆ.

ಟೆಂಡರ್ ಕರೆಯದೇ ಸುಮಾರು 13 ,663 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ವಿವಿಧ ಕಂಪನಿಗಳಿಗೆ ನೀಡಲಾಗಿತ್ತು ಎಂಬ ಮುಂಬೈ ಮೂಲದ ಆರ್.ಟಿ.ಐ ಕಾರ್ಯಕರ್ತ ಅನಿಲ್ ಆರೋಪಗಳನ್ನು ಯುಐಡಿಐ ತಳ್ಳಿಹಾಕಿದೆ.   ಆರ್.ಟಿ.ಐ ಕಾರ್ಯಕರ್ತ ಆಧಾರ್ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಯೋಜನೆಯ ಉಪನಿರ್ದೇಶಕ ಹೆಚ್.ಎಲ್ ವರ್ಮಾ ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಿಕ್ಕಿರುವ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ, ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದಾಗಿ ಯುಐಡಿಐ ನ  ಗೌರವಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ವರ್ಮಾ ಆರೋಪಿಸಿದ್ದಾರೆ. 13 ಸಾವಿರ ಕೋಟಿ ರೂಪಾಯಿ ಹಣವನ್ನು ವ್ಯಾಯ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ, ಸಾರ್ವಜನಿಕ ವಲಯದ ಬ್ಯಾಂಕುಗಳು, ಸಾರ್ವಜನಿಕ ಸಂಸ್ಥೆಗಳು ಹಾಗೂ ಅವುಗಳ ಸಂಸ್ಥೆಗಳಿಗೆ ಪ್ರತಿ ಆಧಾರ್ ಕಾರ್ಡ್ ನೋಂದಣಿಗೆ 40 ರೂಪಾಯಿ ನೀಡಲಾಗುತ್ತದೆ. ಅದ್ದರಿಂದ ಟೆಂಡರ್ ಕರೆಯುವ ಅಗತ್ಯವಿರುವುದಿಲ್ಲ ಎಂದು ವರ್ಮಾ ತಿಳಿಸಿದ್ದಾರೆ.

ಆರ್.ಟಿ.ಐ ಮೂಲಕ ಮಾಹಿತಿ ಪಡೆದಿದ್ದ ಅನಿಲ್, ಆಧಾರ್ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಯುಐಡಿಐ 13 ಸಾವಿರ ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ಟೆಂಡರ್ ಕರೆಯದೇ ನೀಡಲಾಗಿತ್ತು ಎಂದು ಆರೋಪಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com