ಫೇಸ್ ಬುಕ್ ಕಚೇರಿಗೆ ಮೋದಿ ಭೇಟಿ: ಸ್ಲೀವ್ಸ್ ಲೆಸ್, ಶಾರ್ಟ್ಸ್ ಗಳಿಗೆ ಗೇಟ್ ಪಾಸ್..!

ಪ್ರಧಾನಿ ನರೇಂದ್ರ ಮೋದಿ ಫೇಸ್ ಬುಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ವಿಚಾರ ಈಗಾಗಲೇ ಸಾಕಷ್ಟು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ.
ಫೇಸ್ ಬುಕ್ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ ಭೇಟಿ
ಫೇಸ್ ಬುಕ್ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ ಭೇಟಿ

ಕ್ಯಾಲಿಫೋರ್ನಿಯಾ: ಪ್ರಧಾನಿ ನರೇಂದ್ರ ಮೋದಿ ಫೇಸ್ ಬುಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ವಿಚಾರ ಈಗಾಗಲೇ ಸಾಕಷ್ಟು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಆಶ್ಚರ್ಯಕರ  ಸುದ್ದಿಯೊಂದು ಹೊರಬಿದ್ದಿದೆ.

ಇಷ್ಟು ದಿನ ಸಿಬ್ಬಂದಿಗಳು ಆರಾಮದಾಯಕವಾಗಿ ಕೆಲಸ ನಿರ್ವಹಿಸಲು ನೆರವಾಗಲಿ ಎಂದು ಫೇಸ್ ಬುಕ್ ಆಡಳಿತ ಮಂಡಳಿ ಯಾವುದೇ ರೀತಿಯ ವಸ್ತ್ರ ಸಂಹಿತೆ ವಿಧಿಸಿರಲಿಲ್ಲ. ಆದರೆ  ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಮೆನ್ಲೋ ಪಾರ್ಕ್ ನಲ್ಲಿರುವ ಫೇಸ್ ಬುಕ್ ಪ್ರಧಾನ ಕಚೇರಿಗೆ ಆಗಮಿಸಿದ ಹಿನ್ನಲೆಯಲ್ಲಿ ಸಂಸ್ಥೆಯ ಎಲ್ಲ  ಸಿಬ್ಬಂದಿಗಳಿಗೆ ವಸ್ತ್ರಸಂಹಿತೆ ಹೇರಲಾಗಿತ್ತು. ಮೂಲಗಳ ಪ್ರಕಾರ ನರೇಂದ್ರ ಮೋದಿ ಅವರ ಗೌರವಾರ್ಥ ಫೇಸ್ ಬುಕ್ ಆಡಳಿತ ಮಂಡಳಿ ತಮ್ಮ ಸಿಬ್ಬಂದಿಗೆ ಈ ಸೂಚನೆ ರವಾನಿಸಿದ್ದು,  ಪುರುಷ ಸಿಬ್ಬಂದಿಗಳು ಸೂಟ್ ಮತ್ತು ಮಹಿಳಾ ಸಿಬ್ಬಂದಿಗಳು ಅಶ್ಲೀಲವಲ್ಲದ ಉತ್ತಮ ವಸ್ತ್ರಗಳನ್ನು ಧರಿಸಬೇಕು ಎಂದು ಸಲಹೆ ನೀಡಿತ್ತು ಎಂದು ತಿಳಿದುಬಂದಿದೆ.

ಅಲ್ಲದೆ ಸಿಬ್ಬಂದಿಗಳು ಸ್ಲೀವ್ ಲೆಸ್ (ತೋಳಿಲ್ಲದ) ಶಾರ್ಟ್ಸ್ (ತುಂಡುಡುಗೆ)ಗಳನ್ನು ಧರಿಸಿ ಬರಬಾರದು ಎಂದೂ ಆಡಳಿತ ಮಂಡಳಿ ಸೂಚನೆ ನೀಡಿತ್ತು ಎಂದು ಹೇಳಲಾಗುತ್ತಿದೆ. ಫೇಸ್  ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೂಡ ಮೋದಿ ಭೇಟಿ ವೇಳೆ ಸೂಟ್ ಧರಿಸಿಯೇ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದರು.

ಸಾಮಾನ್ಯವಾಗಿ ಗಣ್ಯರನ್ನು ಭೇಟಿ ಮಾಡುವ ವೇಳೆ ಭಾರತ ಪ್ರಧಾನಿ ನರೇಂದ್ರ ಮೋದಿ ವಿಶಿಷ್ಟ ಉಡುಗೆಗಳನ್ನು ತೊಡುತ್ತಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ  ಜಾಲತಾಣ ದಿಗ್ಗಜ ಫೇಸ್ ಬುಕ್ ಸಂಸ್ಥೆ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನು ಭೇಟಿ ಮಾಡುವ ವೇಳೆ ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಜಾಕೆಟ್ ತೊಟ್ಟಿದ್ದರು. ಮಾರ್ಕ್  ಜುಗರ್ ಬರ್ಗ್ ತಮ್ಮ ಎಂದಿನ ಶೈಲಿಯಂತೆ ಬೂದು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಸೂಟ್ ಧರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com