ತಿರುಪತಿಗೆ ಇನ್ನಿಲ್ಲ ಕೆಎಂಎಫ್ ತುಪ್ಪ

ರಾಜ್ಯದ ಕೆಎಂಎಫ್ ಗೆ ತಿರುಪತಿಯ ಗೋವಿಂದ ತುಪ್ಪದ ನಾಮವನ್ನೇ ಹಾಕಿದ್ದಾರೆ! ಕಳೆದ 20ವರ್ಷಗಳಿಂದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಕೆಎಂಎಫ್ ಗೆ ತಿರುಪತಿಯ ಗೋವಿಂದ ತುಪ್ಪದ ನಾಮವನ್ನೇ ಹಾಕಿದ್ದಾರೆ! ಕಳೆದ 20ವರ್ಷಗಳಿಂದ ರಾಜ್ಯಕ್ಕೆ ಸಿಕ್ಕಿದ್ದ ತುಪ್ಪ ಆಕಸ್ಮಿಕವಾಗಿ ಜಾರಿ ಮಹಾರಾಷ್ಟ್ರದ ರೊಟ್ಟಿಗೆ ಬಿದ್ದಿದೆ.

ತಿರುಪತಿಯಲ್ಲಿ ಲಡ್ಡು ತಯಾರಿಸಲು ರಾಜ್ಯದ ನಂದಿನಿಯಿಂದ ಹೋಗುತ್ತಿದ್ದ ತುಪ್ಪದ ಮಾರಾಟಕ್ಕೆ ಬ್ರೇಕ್ ಬಿದ್ದಿದ್ದು, ಇನ್ನುಮುಂದೆ ತಿರುಪತಿ ಲಡ್ಡು ತಯಾರಿಸಲು ಮಹಾರಾಷ್ಟ್ರದ ತುಪ್ಪ ಬಳಕೆಯಾಗಲಿದೆ. ಇತ್ತೀಚಿಗೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಕೆಎಂಎಫ್ ಗೆ ಸಿಕ್ಕಿದ್ದ ತುಪ್ಪ ಪೂರೈಕೆ ಗುತ್ತಿಗೆ ಮಹಾರಾಷ್ಟ್ರದ ಗೋವಿಂದ್ ಮಿಲ್ಕ್ ಯೂನಿಯನ್‍ಗೆ ದೊರಕಿದೆ.

ಟೆಂಡರ್ ಪ್ರಕ್ರಿಯೆದಲ್ಲಿ ಗೋವಿಂದ್ ಮಿಲ್ಕ್ ಯೂನಿಯನ್ ಸಂಸ್ಥೆ ಕೆ.ಜಿ ತುಪ್ಪಕ್ಕೆ ರು.324 ಕೋಟ್ ಮಾಡಿದ್ದರೆ, ಕೆಎಂಎಫ್ ರು.276 ನಿಗದಿ ಮಾಡಿತ್ತು. ಇದರಲ್ಲಿ ರಾಜ್ಯದ ವ್ಯಾಟ್ ಪ್ರಮಾಣ ಹೆಚ್ಚಾಗಿದ್ದರಿಂದ ಕೆಎಂಎಫ್ ನ ಒಟ್ಟಾರೆ ದರ 324ರು.ಗಳಿಗಿಂತ ಜಾಸ್ತಿಯಾಗುತ್ತದೆ. ಹೀಗಾಗಿ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ರಾಜ್ಯದ ಕೆಎಂಎಫ್ ತುಪ್ಪವನ್ನು ತಿರಸ್ಕರಿಸಿ, ಗೋವಿಂದ್ ಮಿಲ್ಕ್ ಸಂಸ್ಥೆಗೆ ಅವಕಾಶ ನೀಡಿದೆ.

ಇದರೊಂದಿಗೆ ಕೆಎಂಎಫ್ ನಿಂದ ತಿರುಪತಿಗೆ ಮಾರಾಟವಾಗುತ್ತಿದ್ದ ರು.100ಕೋಟಿ ಮೌಲ್ಯದ ತುಪ್ಪ ಈಗ ರಾಜ್ಯದಲ್ಲೇ ಉಳಿಯಲಿದೆ. ಇದರೊಂದಿಗೆ ಈಗಾಗಲೇ ಬೆಣ್ಣೆ ಮಾರಾಟ ಮಾಡಲಾಗದೆ ಪರದಾಡುವ ಕೆಎಂಎಪ್ ಗೆ ಇನ್ನಷ್ಟು ನಷ್ಟದ ಹೊರೆ ಬೀಳಲಿದೆ. ಇದರ ಪರಿಣಾಮ ಕೆಎಂಎಫ್ ಆರ್ಥಿಕ ವ್ಯವಸ್ಥೆಯನ್ನೂ ಕೊಂಚ ಅಲುಗಾಡಿಸಬಹು ದು ಎಂದು ಹೇಳಲಾಗಿದೆ.

ತಿರುಪತಿ ಲಡ್ಡು ಸೇವಿಸುವ ಭಕ್ತರಿಗೆ ಕರ್ನಾಟಕ ಕಾಣಿಕೆಯೂ ಇದೆ ಎನ್ನುವ ಸಾರ್ಥಕ ಭಾವ ಮತ್ತು ಅಭಿಮಾನ ಹೆಚ್ಚಾಗುತ್ತಿತ್ತು. ಆದರೆ ಟೆಂಡರ್‍ನಲ್ಲಿ ನಂದಿನಿ ಸೋಲು ಅನುಭವಿಸಿದ ಕಾರಣ ಈಗ ತಿರುಪತಿ ಲಡ್ಡು ತಿಂದು ಕೈ ಮುಗಿಯಬೇಕೇ ಹೊರತು, ನಾಡಿನ ಅಭಿಮಾನ ಮೆರೆಯುವುದಕ್ಕೆ ಸಾಧ್ಯವಿಲ್ಲ ದಂತಾಗಿದೆ.

ತಿರುಪತಿ ದೇವಸ್ಥಾನ ಸಂಸ್ಥೆಯವರು ಇತ್ತೀಚಿಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡುತ್ತಿರುವುದರಿಂದ ರಾಜ್ಯಕ್ಕೆ ಅವಕಾಶ ತಪ್ಪುತ್ತಿದೆ. ಹಾಗೆಯೇ ರಾಜ್ಯದ ವ್ಯಾಟ್ ಪ್ರಮಾಣ ಹೆಚ್ಚಾಗಿರುವುದು ಕೂಡ ಈ ಸ್ಥಿತಿ ಕಾರಣ ಎಂದು ಕೆಎಂಎಫ್ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿಗಳು ಕನ್ನಡಪ್ರಭಗೆ ತಿಳಿಸಿದ್ದಾರೆ.

ತುಪ್ಪದಲ್ಲಿ ಆಗಿರುವ ತಪ್ಪೇನು?
ರಾಜ್ಯ ಸಹಕಾರಿ ಕ್ಷೇತ್ರದ ಪ್ರಮುಖ ಸಂಸ್ಥೆ ವಿಶ್ವ ಖ್ಯಾತಿಯ ತಿರುಪತಿ ದೇವಸ್ಥಾನಕ್ಕೆ ಪ್ರತಿ ವರ್ಷ 3300ಮೆಟ್ರಿಕ್ ಟನ್‍ಗಳಷ್ಟು ತುಪ್ಪವನ್ನು ಮಾರಾಟ ಮಾಡುತ್ತಿತ್ತು. ಇದರಿಂದ ರಾಜ್ಯಕ್ಕೆ ವರ್ಷಕ್ಕೆ ರು.100ಕೋಟಿಗಳಷ್ಟು ವ್ಯವಹಾರ ನಡೆಯುತ್ತಿತ್ತು. ಇದರಿಂದ ಕೆಎಂಎಫ್ ಗೆ ಲಾಭವಾಗುತ್ತಿದೆ ಎನ್ನುವುದಕ್ಕಿಂತ ಮುಖ್ಯವಾಗಿ ವಿಶ್ವ ಖ್ಯಾತಿಯ ತಿರುಪತಿಯ ಪ್ರಸಾದ ಲಡ್ಡು ತಯಾರಿಸಲು ಕೆಎಂಎಫ್ ನಂದಿನ ತುಪ್ಪ ಬಳಕೆ ಮಾಡುತ್ತಿರುವುದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com