
ಸಾಂದರ್ಭಿಕ ಚಿತ್ರ
ಕೊಚ್ಚಿಯಲ್ಲಿ ಮೊನ್ನೆ 26ರಂದು ಮೀನುಗಾರಿಕೆ ನಡೆಸುತ್ತಿದ್ದ ಹಡಗು ಡಿಕ್ಕಿ ಹೊಡೆದ ಪರಿಣಾಮ 35 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ದೋಣಿ ಮಗುಚಿ ಬಿದ್ದು 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. 25 ಮಂದಿಯನ್ನು ರಕ್ಷಿಸಲಾಗಿತ್ತು.
ಇಂದು ಮತ್ತೆ ಪುನ್ನಮಾಡಾ ಎಂಬ ನದಿಯ ಹಿನ್ನೀರಿನಲ್ಲಿ ಬೆಂಕಿ ಅವಘಡದಿಂದ ಒಂ ದು ದೋಣಿ ಸಂಪೂರ್ಣ ನಾಶಗೊಂಡು ಮತ್ತೊಂದು ಭಾಗಶಹ ಹಾಳಾಗಿದೆ. ಇದರಲ್ಲಿ ಪ್ರಯಾಣಿಕರಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಾರ್ಟ್ ಸಕ್ಯ್ರೂಟಿನಿಂದ ಈ ಅವಘಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.