ಫ್ಲೈ ಓವರ್ ದುರಂತ ಸ್ಥಳಕ್ಕೆ ರಾಹುಲ್ ಭೇಟಿ ವಿರುದ್ಧ ಕಿಡಿಕಾರಿದ ಬಿಜೆಪಿ

ಉತ್ತರ ಕೋಲ್ಕತಾದಲ್ಲಿ ಸಂಭವಿಸಿದ ಫ್ಲೈ ಓವರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ...
ಕೋಲ್ಕತಾ ಫ್ಲೈ ಓವರ್ ದುರಂತ ಸಂಭವಿಸಿದ ಸ್ಥಳಕ್ಕೆ ರಾಹುಲ್ ಗಾಂಧಿಯವರು ಭೇಟಿ ನೀಡಿರುವ ಚಿತ್ರ
ಕೋಲ್ಕತಾ ಫ್ಲೈ ಓವರ್ ದುರಂತ ಸಂಭವಿಸಿದ ಸ್ಥಳಕ್ಕೆ ರಾಹುಲ್ ಗಾಂಧಿಯವರು ಭೇಟಿ ನೀಡಿರುವ ಚಿತ್ರ

ನವದೆಹಲಿ: ಉತ್ತರ ಕೋಲ್ಕತಾದಲ್ಲಿ ಸಂಭವಿಸಿದ ಫ್ಲೈ ಓವರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿರುವುದರ ವಿರುದ್ಧ ಬಿಜೆಪಿ ಶನಿವಾರ ಕಿಡಿಕಾರಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಸಿಂಗ್ ಅವರು, ರಾಹುಲ್ ಗಾಂಧಿಯವರು ರಾಜಕೀಯ ವಲಯದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಫೋಟೋಗಾಗಿ ಭೇಟಿ ನೀಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಂತೆ ಫ್ಲೈ ಓವರ್ ಕುಸಿತ ಘಟನಾ ಸ್ಥಳಕ್ಕೂ ಫೋಟೋಗಾಗಿಯೇ ಭೇಟಿ ನೀಡಿದ್ದಾರೆಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಇದ್ದ ಸಿಪಿಐ(ಎಂ) ಸರ್ಕಾರದ ಅವಧಿಯಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಇದೀಗ ಫ್ಲೈ ಓವರ್ ಕುಸಿದು ಬಿದ್ದಿದ್ದು, ರಾಹುಲ್ ಗಾಂಧಿಯವರು ನಿರ್ಮಾಣಕಾರರಿಗೆ ಯಾವ ಶಿಕ್ಷೆಯನ್ನು ನೀಡುತ್ತಾರೆ ಹಾಗೂ ಈ ಬಗೆಗಿನ ಅವರ ನಿಲುವಿನ ಕುರಿತಂತೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರನ್ನು ಹೋಲಿಕೆ ಮಾಡಿ ಟೀಕೆ ಮಾಡಿರುವ ಅವರು, ಫ್ಲೈ ಓವರ್ ಕುಸಿದು ಬಿದ್ದಾಗ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು. ಹೀಗಾಗಿ ಬಿಜೆಪಿ ಸಚಿವರು ಕಾರ್ಯಾಚರಣೆಗೆ ಅಡ್ಡಿಯಾಗಬಾರದು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಭೇಟಿ ನೀಡುವ ಮೂಲಕ ಕಾರ್ಯಾಚರಣೆಗೆ ಮತ್ತಷ್ಟು ತೊಂದರೆನ್ನುಂಟು ಮಾಡಿದ್ದರು ಇದಕ್ಕೆ ರಾಹುಲ್ ಗಾಂಧಿಯವರು ಉತ್ತರಿಸಬೇಕು.

ಘಟನೆ ಸಂಭವಿಸಿದಾಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಎನ್ ಡಿಆರ್ ಎಫ್ ಮತ್ತು ಸೇನಾ ಪಡೆಗೆ ಕಾರ್ಯಾಚರಣೆ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದರು. ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಕೂಡ ಕೋಲ್ಕತಾದಲ್ಲೇ ಇದ್ದರು. ಕಾರ್ಯಾಚರಣೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಅವರಾರೂ ಘಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com