ರಸ್ತೆ ಅಪಘಾತದಲ್ಲಿ ಚೆನ್ನೈ ನಗರಕ್ಕೆ ವಿಶ್ವದಲ್ಲೇ ಎರಡನೇ ಸ್ಥಾನ

ವಿಶ್ವದಲ್ಲಿಯೇ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವ ಪಟ್ಟಿಯಲ್ಲಿ ಚೆನ್ನೈ ನಗರ ಎರಡನೇ ಸ್ಥಾನ ಪಡೆದಿದೆ ಎಂದು ಗ್ಲೋಬಲ್ ರಿಪೋರ್ಟ್ ಆನ್ ಅರ್ಬನ್ ಹೆಲ್ತ್ ಸಂಸ್ಥೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:  ವಿಶ್ವದಲ್ಲಿಯೇ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವ ಪಟ್ಟಿಯಲ್ಲಿ ಚೆನ್ನೈ ನಗರ ಎರಡನೇ ಸ್ಥಾನ ಪಡೆದಿದೆ ಎಂದು ಗ್ಲೋಬಲ್ ರಿಪೋರ್ಟ್ ಆನ್ ಅರ್ಬನ್ ಹೆಲ್ತ್ ಸಂಸ್ಥೆ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಲಕ್ಷಕ್ಕೆ 26.6 ರಷ್ಟಿದ್ದು, ವಿಶ್ವದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಬ್ರೆಜಿಲ್‌ನ ಫೋರ್ಟಾಲೆಝಾ ನಗರ ಮೊದಲನೆ ಸ್ಥಾನ ಪಡೆದಿದೆ ಎಂದು ಪ್ರಕಟಿಸಿದೆ.

ಜೈಪುರ್ ನಾಲ್ಕನೇ ಸ್ಥಾನ ಪಡೆದಿದ್ದರೆ ಇಂದೋರ್ 16ನೇ ಸ್ಥಾನ ಪಡೆದಿದೆ. ಕೋಲ್ಕತಾ, ದೆಹಲಿ, ಬೆಂಗಳೂರು ಕ್ರಮವಾಗಿ 23,24, 25ನೇ ಸ್ಥಾನ ಪಡೆದಿವೆ. ಮುಂಬೈ 40ನೇ ಸ್ಥಾನ ಪಡೆದಿದೆ. ಸುರಕ್ಷಿತ ರಸ್ತೆ ಸಂಚಾರ ವ್ವಸ್ಥೆ ಜಾರಿಗೆ ತರುವುದರ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

ಒಂದು ವೇಳೆ ರಸ್ತೆ ಸಂಚಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡಲ್ಲಿ ಇಂದಿನ ಚೆನ್ನೈ ನಾಳಿನ ಸ್ಟಾಕ್‌ಹೋಮ್ ಆಗಬಹುದು. ಸ್ವಿಡನ್‌ನ ಸ್ಟಾಕ್‌ಹೋಮ್‌ನಲ್ಲಿ ಒಂದು ಲಕ್ಷಕ್ಕೆ ಕೇವಲ 0.7 ರಷ್ಟು ರಸ್ತೆ ಅಪಘಾತಗಳಾಗುತ್ತಿದ್ದು, ಶೂನ್ಯಕ್ಕೆ ತರಲು ಅಲ್ಲಿನ ಸರ್ಕಾ ಪ್ರಯತ್ನಿಸುತ್ತಿದೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com