ಕಳೆದ ಮಾರ್ಚ್ 28ರಂದು ಕಲ್ಲಿದ್ದಲು ಹಗರಣದ ಮೊದಲ ತೀರ್ಪು ಪ್ರಕಟಿಸಿದ್ದ ಸಿಬಿಐ ನ್ಯಾಯಾಲಯ, ,ಆರ್.ಎಸ್ ರಂಗ್ಟ ಹಾಗೂ ಆರ್.ಸಿ.ರಂಗ್ಟ ಅವರು ತಪ್ಪಿತಸ್ಥರು ಎಂದು ಹೇಳಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದರಿಸಿತ್ತು. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಶರ್ ಅವರು, ಅಪರಾಧಿಗಳಿಗೆ ನಾಲ್ಕು ವರ್ಷ ಜೈಲು ಹಾಗೂ ತಲಾ 5ಲಕ್ಷ ದಂಡ ವಿಧಿಸಿದ್ದಾರೆ. ಅಲ್ಲದೆ ಜೆಐಪಿಎಲ್ ಕಂಪನಿ ಕೂಡ 25 ಲಕ್ಷ ರುಪಾಯಿ ದಂಡ ಕಟ್ಟಬೇಕು ಎಂದು ನ್ಯಾಯಾಲಯ ಆಜ್ಞಾಪಿಸಿದೆ.