
ನವದೆಹಲಿ: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಎನ್ ಐಎ ಅಧಿಕಾರಿ ಕುಟುಂಬಕ್ಕೆ ದೆಹಲಿ ಸರ್ಕಾರ ಸೋಮವಾರ ರು.1 ಕೋಟಿ ಪರಿಹಾರ ಧನವನ್ನು ಘೋಷಿಸಿದೆ.
ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಪ್ರಕರಣದ ತನಿಖಾ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಎನ್ ಐಎ ಅಧಿಕಾರಿ ಮೊಹಮ್ಮದ್ ತಾಂಝೀಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮದುವೆ ಸಮಾರಂಭಕ್ಕೆ ಹೋಗಿ ಹಿಂತಿರುಗು ಬರುತ್ತಿದ್ದರು ಈ ವೇಳೆ ಬಿಜ್ನೋರ್ ಜಿಲ್ಲೆಯಲ್ಲಿರುವ ಸಾಹಸ್ಪುರ ಗ್ರಾಮದ ಬಳಿ ಬರುತ್ತಿದ್ದಂತೆ ಮುಸುಧಾರಿಗಳಾಗಿ ಬಂಧೂಕು ಹಿಡಿದು ಬಂದಿರುವ ದುಷ್ಕರ್ಮಿಗಳು ಏಕಾಏಕಿ ಅಧಿಕಾರಿಯ ಮೇಲೆ ಗುಂಡಿನ ಮಳೆಸುರಿಸಿದ್ದಾರೆ.
ಘಟನೆ ವೇಳೆ 24 ಗುಂಡುಗಳು ಅಧಿಕಾರಿಯ ದೇಹದೊಳಗೆ ಹೊಕ್ಕಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಅಧಿಕಾರಿಯ ಪತ್ನಿಗೂ ಗುಂಡು ಬಿದ್ದಿದ್ದು, ಇದೀಗ ಆಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಮಕ್ಕಳು ಕುಳಿತಿದ್ದ ಕಾರಣ ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲ.
ಇದೀಗ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರಿಯ ಕುಟುಂಬಸ್ಥರಿಗೆ ಪರಿಹಾರ ಧನವನ್ನು ಘೋಷಿಸಿದ್ದು, ರು.1 ಕೋಟಿ ಧನವನ್ನು ನೀಡುವುದಾಗಿ ತಿಳಿಸಿದ್ದಾರೆ.
ದೆಹಲಿ ಸರ್ಕಾರ ಪರಿಹಾರ ಘೋಷಿಸಿರುವುದಕ್ಕೆ ಸಂಸತ ವ್ಯಕ್ತಪಡಿಸಿರುವ ದೆಹಲಿ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಅವರು ಕೇಜ್ರಿವಾಲ್ ಅವರು ಅಧಿಕಾರಿಯ ಕುಟುಂಬಸ್ಥರಿಗೆ ರು. 1 ಕೋಟಿ ಪರಿಹಾರ ಧನ ಘೋಷಿಸಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಘಟನೆ ತೀರಾ ಗಂಭೀರವಾಗಿದ್ದು, ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement