
ಮಥುರಾ: ಇಲ್ಲಿನ ಧಾರ್ಮಿಕ ನಾಯಕರ ಅನುಯಾಯಿಗಳು ನಡೆಸಿರುವ ದಾಳಿ ವೇಳೆ ತಹಸೀಲ್ದಾರ್ ಸಿಬ್ಬಂದಿಗಳು, ವಕೀಲರು ಸೇರಿ 12 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಧಾರ್ಮಿಕ ನಾಯಕರ ಅನುಯಾಯಿಗಳು ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆಂದು ಹೇಳಿ 2 ವರ್ಷದ ಹಿಂದೆ ಪ್ರಕರಣವೊಂದು ದಾಖಲಾಗಿದೆ. ಇದರಂತೆ ಪ್ರಕರಣ ಸಂಬಂಧ ನಿನ್ನೆ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ, ವಿಚಾರಣೆ ನಡೆದಿರಲಿಲ್ಲ. ಇನ್ನು ಆಕ್ರಮಿಸಿಕೊಂಡಿರುವ ಭೂಮಿಯನ್ನು ಇಂದು ವಶಪಡಿಸಿಕೊಳ್ಳಲಾಗುತ್ತದೆ ಎಂದು ಆರ್ ಎಲ್ ಡಿ ನಾಯಕ ನೇತೃತ್ವದ ಜವಹಾರ್ ಬಘ್ ಮುಕ್ತಿ ಆಂದೋಲನ ಸಮಿತಿ ಹೇಳಿತ್ತು.
ಇದರ ನಡುವೆಯೇ ಧಾರ್ಮಿಕ ನಾಯಕರ ಅನುಯಾಯಿಗಳು ದೂರು ದಾಖಲಿಸಿದವರೊಂದಿಗೆ ಘರ್ಷಣೆಗಿಳಿದಿದ್ದಾರೆ. ಘಟನೆ ವೇಳೆ ಇಬ್ಬರ ನಡುವೆ ನಡೆದಿರುವ ಘರ್ಷಣೆಯಲ್ಲಿ ವಕೀಲರು ಸೇರಿ 12 ಮಂದಿ ಗಾಯಗೊಂಡಿದ್ದಾರೆ.
ಘಟನೆ ಕುರಿತಂತೆ ಮಾತನಾಡಿರುವ ತೆಹ್ಸೀಲ್ ವಕೀಲರ ವೇದಿಕೆಯ ಮುಖ್ಯಸ್ಥ ಹುಕುಮ್ ಸಿಂಗ್ ಅವರ, ಪ್ರಕರಣವನ್ನು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿಲ್ಲ. ಹೀಗಾಗಿ ಮಥುರಾ ಬಾರ್ ಅಸೋಸಿಯೇಷನ್ ಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದ್ದಾರೆ.
Advertisement