ಸಾಂದರ್ಭಿಕ ಚಿತ್ರ
ದೇಶ
ಭದ್ರತಾ ಎಚ್ಚರಿಕೆ! ಭಾರತ ಪ್ರವೇಶಿಸಿದ ಪಾಕ್ ನ 3 ಉಗ್ರರು
ಪಾಕಿಸ್ತಾನದ ಮೂವರು ಉಗ್ರರು ಭಾರತ ಪ್ರವೇಶಿಸಿದ್ದು, ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ...
ಚಂಡೀಗಢ: ಪಾಕಿಸ್ತಾನದ ಮೂವರು ಉಗ್ರರು ಭಾರತ ಪ್ರವೇಶಿಸಿದ್ದು, ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಂಜಾಬ್ ಪೊಲೀಸರು ಬುಧವಾರ ಭದ್ರತಾ ಎಚ್ಚರಿಕೆ ನೀಡಿದ್ದಾರೆ.
ಜೆಕೆ 01, ಎಬಿ 2654 ಸಂಖೆಯ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸ್ಥಳೀಯರೊಂದಿಗೆ ಪಾಕಿಸ್ತಾನದ ಮೂವರು ಉಗ್ರರು ಭಾರತದೊಳಗೆ ನುಸುಳಿದ್ದು, ಕಾರಿನಲ್ಲಿ ಅಪಾರ ಪ್ರಮಾಣದ ಶಸ್ತಾಸ್ತ್ರಗಳು ಹಾಗೂ ಆತ್ಮಾಹುತಿ ದಾಳಿ ಬೆಲ್ಟ್ ಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಭಾರತ ಪ್ರವೇಶಿಸಿರುವ ಉಗ್ರರು ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ದೆಹಲಿ ವಿಶೇಷ ಘಟಕದ ಪಂಜಾಬ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಜನವರಿಯಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರ ದಾಳಿ ನಡೆಯುವ ಮುನ್ನ ಇಂತಹದ್ದೆ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾರಿಯ ಭದ್ರತಾ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ