'ಭಾರತ್ ಮಾತಾ ಕಿ ಜೈ' ಹೇಳದಿರುವವರನ್ನು ಪಾಕ್'ಗೆ ಕಳುಹಿಸಬೇಕು: ಇಂದ್ರೇಶ್ ಕುಮಾರ್

ಭಾರತ್ ಮಾತಾ ಕಿ ಜೈ ಘೋಷಣೆ ಕೂಗಲು ವಿರೋಧ ವ್ಯಕ್ತಪಡಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ನಾಯಕ...
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ನಾಯಕ ಇಂದ್ರೇಶ್ ಕುಮಾರ್
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ನಾಯಕ ಇಂದ್ರೇಶ್ ಕುಮಾರ್

ವಾರಣಾಸಿ: ಭಾರತ್ ಮಾತಾ ಕಿ ಜೈ ಘೋಷಣೆ ಕೂಗಲು ವಿರೋಧ ವ್ಯಕ್ತಪಡಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ನಾಯಕ ಇಂದ್ರೇಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಷ್ಟ್ರದ ಪರವಾಗಿ ಘೋಷಣೆ ಕೂಗದವರನ್ನು, ಪಾಕಿಸ್ತಾನದ ಧ್ವಜವನ್ನು ಹಾರಿಸುವವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಪಾಕಿಸ್ತಾನವನ್ನು ಪ್ರೀತಿ ಮಾಡುವವರು ಭಾರತವನ್ನು ದ್ವೇಷಿಸುತ್ತಾರೆ, ಭಾರತವರೊಂದಿಗೆ ಬಾಳಲು ಇಚ್ಛಿಸದವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಹೇಳಿದ್ದಾರೆ.

ಭಾರತವನ್ನು ಪ್ರೀತಿ ಮಾಡದವರನ್ನು, ಗೌರವ ನೀಡದವರನ್ನು, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರನ್ನು, ರಾಷ್ಟ್ರ ಧ್ವಜವನ್ನು ಹಾರಿಸಿ ಪಾಕಿಸ್ತಾನ ಜಿಂದಾಬಾದ್ ಹೇಳುವವರನ್ನು ಅವರ ಕುಟುಂಬಸ್ಥರೊಂದಿಗೆ ಪಾಕಿಸ್ತಾನಕ್ಕೆ ಕಳುಹಿಸಬೇಕು. ಭಾರತದಲ್ಲಿ ಭಯೋತ್ಪಾದನೆ ಹಾಗೂ ಹಿಂಸೆಗಳು ನಡೆಯಬಾರದು ಎನ್ನುವುದೇ ಆದರೆ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಓವೈಸಿ ವಿರುದ್ಧ ಕಿಡಿಕಾರಿರುವ ಅವರು, ಇಬ್ಬರು ವ್ಯಕ್ತಿಗಳು ಮದ್ರೆ ವತನ್ ಹಿಂದೂಸ್ತಾನ್ ಎಂದು ಕೂಗಲು ತಯಾರಿದ್ದೇವೆಂದು ಹೇಳಿದ್ದಾರೆ. ಇದು ಉರ್ದು ಭಾಷೆಯಲ್ಲಿದ್ದು, ಹಿಂದಿಗೆ ಅನುವಾದ ಮಾಡಿದರೆ ಇದರ ಅರ್ಥ ಭಾರತ್ ಮಾತಾ ಕಿ ಜೈ ಎಂದಾಗುತ್ತದೆ. ಭಾಷೆಯ ಮೇಲೆ ಅವರಿಗೆ ದ್ವೇಷವಿದೆ ಎಂಬುದು ಇದರಿಂದ ತಿಳಿಯುತ್ತದೆ.

ಭಾಷೆಯೆಂಬುದು ಅಭಿವ್ಯಕ್ತಿಯ ಒಂದು ಪ್ರಕ್ರಿಯೆಯಷ್ಟೇ. ಒಂದು ಭಾಷೆಯನ್ನು ಪ್ರೀತಿಸುವುದು, ದ್ವೇಷಿಸುವುದು ಮತ್ತೊಂದನ್ನು ಎಂದಾದರೆ ಇದು ಅವರ ಭಿನ್ನತೆ ಹಾಗೂ ಅತೀಯತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com