ನಾಸಿಕ್ ನ ರಾಮ್ ಕುಂಡ್ ನಲ್ಲಿ ನೀರಿಗೆ ಬರ, 130 ವರ್ಷದಲ್ಲೇ ಮೊದಲ ಬಾರಿಗೆ ಬತ್ತಿದ ನೀರು

ನಾಸಿಕ್ ನ ಗೋದಾವರಿ ನದಿ ದಂಡೆಯಲ್ಲಿರುವ ಪುಣ್ಯ ಸ್ನಾನ ಮಾಡುವ ಪ್ರದೇಶ ರಾಮ್ ಕುಂಡ್ ನಲ್ಲಿ ನೀರಿಗೆ ಬರ ಎದುರಾಗಿದೆ.
ನಾಸಿಕ್ ನ ರಾಮ್ ಕುಂಡ್ (ಸಂಗ್ರಹ ಚಿತ್ರ)
ನಾಸಿಕ್ ನ ರಾಮ್ ಕುಂಡ್ (ಸಂಗ್ರಹ ಚಿತ್ರ)

ನಾಸಿಕ್: ನಾಸಿಕ್ ನ ಗೋದಾವರಿ ನದಿ ದಂಡೆಯಲ್ಲಿರುವ ಪುಣ್ಯ ಸ್ನಾನ ಮಾಡುವ ಪ್ರದೇಶ ರಾಮ್ ಕುಂಡ್ ನಲ್ಲಿ ನೀರಿಗೆ ಬರ ಎದುರಾಗಿದೆ. ನಾಸಿಕ್ ಗೆ ಆಗಮಿಸುವ ಯಾರ್ತಾರ್ಥಿಗಳು ರಾಮ್ ಕುಂಡ್ ನಲ್ಲಿ ಪವಿತ್ರ ಸ್ನಾನ ಮಾಡಿ ವಿವಿಧ ರೀತಿಯ ಧಾರ್ಮಿಕ ಆಚರಣೆಗೆ ಅಣಿಯಾಗುತ್ತಿದ್ದರು. ಆದರೆ 130 ವರ್ಷಗಳಲ್ಲೇ ಮೊದಲ ಬಾರಿಗೆ ರಾಮ್ ಕುಂಡ್ ನಲ್ಲಿ ನೀರು ಬತ್ತಿದೆ.
ಪ್ರತಿ ವರ್ಷವೂ ಯುಗಾದಿ ಅಂಗವಾಗಿ ಚೈತ್ರ ಮಾಸದ ಮೊದಲ ದಿನ(ಏ.8)ರಂದು ಗುಡಿ ಪಾಡ್ವ ಆಚರಣೆ ನಡೆಯಲಿದೆ. ಈ ಆಚರಣೆಯ ಅಂಗವಾಗಿ ಯಾತ್ರಾರ್ಥಿಗಳು ರಾಮ್ ಕುಂಡ್ ನಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಇದೆ. ಆದರೆ ಈ ಬಾರಿ ರಾಮ್ ಕುಂಡ್ ನಲ್ಲಿ ನೀರು ಬತ್ತಿರುವುದರಿಂದ ಯಾತ್ರಾರ್ಥಿಗಳು ಪ್ರತಿ ವರ್ಷದಂತೆ ಆಚರಣೆ ನಡೆಸಲು ಸಾಧ್ಯವಾಗುವುದಿಲ್ಲ.  
"ರಾಮ್ ಕುಂಡ್ ನಲ್ಲಿ ನೀರು ಸಂಪೂರ್ಣ ಬತ್ತಿರುವುದರಿಂದ ಯುಗಾದಿ ಅಂಗವಾಗಿ ಗುಡಿ ಪಾಡ್ವ ಆಚರಣೆ ಮಾಡಲಿರುವ ಯಾತ್ರಾರ್ಥಿಗಳು ಈ ಬಾರಿ ರಾಮ್ ಕುಂಡ್ ನಲ್ಲಿ ಪವಿತ್ರ ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ, ಜುಲೈ ಅಂತ್ಯದ ವರೆಗೂ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ನಾಸಿಕ್ ನಗರಪಾಲಿಕೆಯ ಉಪ ಮೇಯರ್ ಗುರ್ಮೀತ್ ಬಗ್ಗಾ  ತಿಳಿಸಿದ್ದಾರೆ. ನೀರು ಬತ್ತಿರುವುದರಿಂದ ರಾಮ್ ಕುಂಡ್ ಈಗ ಮಕ್ಕಳಿಗೆ ಆಟದ ಮೈದಾನವಾಗಿದ್ದು, ಮಕ್ಕಳು ಕ್ರಿಕೆಟ್, ಫುಟ್ ಬಾಲ್ ಮುಂತಾದ ಆಟಗಳನ್ನು ಆಡುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com