
ಮುಂಬೈ: ಐಪಿಎಲ್ ಪಂದ್ಯಾವಳಿಗಳಿಗಾಗಿ ಮುಂಬೈ ನ ಸ್ಟೇಡಿಯಂ ಪಿಚ್‌ಗಳಿಗೆ ನೀರುಣಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪಿಚ್ ಗಳಿಗೆ ನೀರುಣಿಸುವುದಕ್ಕೆ ಕುಡಿಯಲು ಯೋಗ್ಯವಾದ ನೀರನ್ನು ಬಳಕೆ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಂಬೈ ನಲ್ಲಿ ನಡೆಯಬೇಕಿರುವ ಐಪಿಎಲ್ ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸಿದರೂ ಸಮಸ್ಯೆ ಇಲ್ಲ ಎಂದು ಹೇಳಿರುವ ದೇವೆಂದ್ರ ಫಡ್ನವೀಸ್, ಪಿಚ್ ಗಳಿಗೆ ನೀರುಣಿಸಲು ಕುಡಿಯಲು ಯೋಗ್ಯವಾದ ನೀರನ್ನು ಎಂದು ತಿಳಿಸಿದ್ದಾರೆ.
ಏ.9 ರಿಂದ ಮುಂಬೈ ನ ವಾಂಖೆಡೆ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ತೀವ್ರ ಬರದ ನಡುವೆಯೂ ಐಪಿಎಲ್ ಸೀಸನ್ 9ರ ಉದ್ಘಾಟನಾ ಪಂದ್ಯಕ್ಕೆ ತಡೆ ನೀಡಲು ನಿರಾಕರಿಸಿ ತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಫಡ್ನವೀಸ್ ಪಿಚ್ ಗಳಿಗೆ ನೀರುಣಿಸಲು ಕುಡಿಯಲು ಯೋಗ್ಯವಾದ ನೀರನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಕ್ರೀಡಾಂಗಣಕ್ಕೆ ಬೇಕಾದ ನೀರನ್ನು ಮಹಾರಾಷ್ಟ್ರ ಸರ್ಕಾರ ನೀಡುವುದಾಗಿ ಸಮ್ಮತಿ ಸೂಚಿಸಿದ ನಂತರ ಎಪ್ರಿಲ್ 9ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿತ್ತು.
Advertisement