ದೆಹಲಿಯ ಮರ್ಸಿಡಿಸ್ ಹಿಟ್ ಅಂಡ್ ರನ್ ಕೇಸು: ಆರೋಪಿಯ ತಂದೆ ಬಂಧನ

ಹೊಸದೊಂದು ತಿರುವಿನಲ್ಲಿ ದೆಹಲಿಯಲ್ಲಿ ಮರ್ಸಿಡಿಸ್ ಕಾರು ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ವಯಸ್ಕ...
ಕಾರು ಅಪಘಾತವಾದ ಸ್ಥಳ
ಕಾರು ಅಪಘಾತವಾದ ಸ್ಥಳ
Updated on

ನವದೆಹಲಿ: ಹೊಸದೊಂದು ತಿರುವಿನಲ್ಲಿ ದೆಹಲಿಯಲ್ಲಿ ಮರ್ಸಿಡಿಸ್ ಕಾರು ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ವಯಸ್ಕನೇ ; ಆತ ಅಪ್ರಾಪ್ತನಲ್ಲ ಎಂಬ ಸಂಶಯ ಪೊಲೀಸರಿಗೆ ಉಂಟಾಗಿದೆ.

ಮೊನ್ನೆ ಏಪ್ರಿಲ್ 4ರಂದು ವೇಗವಾಗಿ ಹೋಗುತ್ತಿದ್ದ ಮರ್ಸಿಡಿಸ್ ಕಾರು ಢಿಕ್ಕಿ ಹೊಡೆದು 33 ವರ್ಷದ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದರು. ಈ ಸಂಬಂಧ ಪೊಲೀಸರು ನಿನ್ನೆ ಅಪ್ರಾಪ್ತನ ತಂದೆ ಮನೋಜ್ ಅಗರ್ ವಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಆರೋಪಿ ಅಪ್ರಾಪ್ತ ಹೌದೇ ಅಲ್ಲವೇ ಎಂಬುದರ ಬಗ್ಗೆ ದೆಹಲಿ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಅಪ್ರಾಪ್ತ ವಿಚಾರಣೆ ವೇಳೆ ದೇಶ ಬಿಟ್ಟು ಹೋಗದಂತೆ ಆತನ ಪಾಸ್ ಪೋರ್ಟ್ ನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಬಾಲಕನ ತಂದೆಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 109 ಮತ್ತು ಸೆಕ್ಷನ್ 304 11ನಡಿ ಬಂಧಿಸಲಾಗಿದೆ ಎಂದು ಉತ್ತರ ದೆಹಲಿಯ ಉಪ ಆಯುಕ್ತ ಮಧು ವರ್ಮಾ ತಿಳಿಸಿದ್ದಾರೆ.

ವಸತಿ ಪ್ರದೇಶದಲ್ಲಿ ವೇಗವಾಗಿ ಕಾರು ಚಲಾಯಿಸಿದರೆ ಯಾರಿಗಾದರೂ ಢಿಕ್ಕಿ ಹೊಡೆದು ಸಾವು ಸಂಭವಿಸಬಹುದು ಎಂದು ಆ ದಿನ ಆರೋಪಿಗೆ ಅರಿವಿತ್ತು ಎಂದು ಸಿಸಿಟಿವಿ ತಿಳಿಸುತ್ತದೆ ಎನ್ನುತ್ತಾರೆ ಪೊಲೀಸರು.

ಉತ್ತರ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ಶಾಂತ್ ನಾಥ್ ಮಾರ್ಗ್ ನಲ್ಲಿ ಸಿದ್ಧಾರ್ಥ್ ಶರ್ಮ ಎಂಬುವವರು ಏಪ್ರಿಲ್ 4ರಂದು ರಾತ್ರಿ ವೇಳೆ ಹತ್ತಿರದ ಮಾರುಕಟ್ಟೆಯಿಂದ ಸಾಮಾನು ತರಲೆಂದು ಮನೆಯಿಂದ ಹೊರಬಂದು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಮರ್ಸಿಡಿಸ್ ಕಾರು ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪೊಲೀಸರು ಅಪ್ರಾಪ್ತನನ್ನು ಬಂಧಿಸಿ ಮರುದಿನವೇ ಬಿಡುಗಡೆ ಮಾಡಿದ್ದರು. ಆದರೆ ಸಿದ್ಧಾರ್ಥ್ ಶರ್ಮ ಅವರ ಕುಟುಂಬದವರು, ಆರೋಪಿಯ ಮೇಲೆ ಪೊಲೀಸರು ಮೃದು ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದರಿಂದ  ಆರೋಪಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com