
ನವದೆಹಲಿ: ಕೇರಳದ ಮೂಕಾಂಬಿಕ ದೇಗುಲದಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿರುವುದು ನೈತಿಕ ಸ್ಥೈರ್ಯವಿದ್ದಂತೆ ಎಂದು ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಘಟನೆಯೊಂದು ದುರಂತ ಅವಘಡವಾಗಿದ್ದು. ದುರಂತಕ್ಕೆ ಇಡೀ ದೇಶವೇ ಸಂತಾಪವನ್ನು ಸೂಚಿಸುತ್ತಿದೆ. ಪ್ರಧಾನಮಂತ್ರಿ ಮೋದಿ ಕೂಡ ಶೀಘ್ರಗತಿಯಲ್ಲಿ ಸ್ಪಂದಿಸಿದ್ದಾರೆಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸಮಯ ವ್ಯರ್ಥ ಮಾಡದೇ, ದೈಹಿಕ, ಭಾವನಾತ್ಮಕವಾಗಿ ಕೇರಳಕ್ಕೆ ಸ್ಪಂದಿಸುತ್ತಿದ್ದಾರೆ. ಸಹಾಯಕ್ಕಾಗಿ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಗೃಹ ಸಚಿವಾಲಯ ಹಾಗೂ ಇತರೆ ಸಂಬಂಧಿತ ಸಚಿವಾಲಯಗಳು ಕ್ರಮ ಕೈಗೊಂಡಿವೆ. ಅಲ್ಲದೆ ಶೀಘ್ರದಲ್ಲಿಯೇ ಪ್ರಧಾನಿ ಮೋದಿ ಸ್ವತಃ ಕೇರಳಕ್ಕೆ ಭೇಟಿ ನೀಡಿದ್ದಾರೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
Advertisement