ದಕ್ಷಿಣ ಭಾರತದ ದೋಸೆಗೆ ಮಾರುಹೋದ ಬ್ರಿಟನ್ ರಾಜಕುಮಾರ ವಿಲಿಯಮ್ ಮತ್ತು ರಾಣಿ ಕೇಟ್ ಮಿಡ್ಲ್ ಟನ್
ದಕ್ಷಿಣ ಭಾರತದ ದೋಸೆಗೆ ಮಾರುಹೋದ ಬ್ರಿಟನ್ ರಾಜಕುಮಾರ ವಿಲಿಯಮ್ ಮತ್ತು ರಾಣಿ ಕೇಟ್ ಮಿಡ್ಲ್ ಟನ್

ಭಾರತದ ತಂತ್ರಜ್ಞಾನ, ನಾವಿನ್ಯತೆಗೆ ತಲೆದೂಗಿದ ಪ್ರಿನ್ಸ್ ವಿಲಿಯಮ್ಸ್

ಭಾರತದ ನಾವಿನ್ಯತೆಗಳಿಗೆ ಬೆರಗಾಗಿ ಹೋದ ಬ್ರಿಟನ್ ನ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್, ವಿಶ್ವದಲ್ಲಿ ಆರನೇ ಅತಿ ದೊಡ್ಡ...
Published on

ಮುಂಬೈ: ಭಾರತದ ನಾವಿನ್ಯತೆಗಳಿಗೆ ಬೆರಗಾಗಿ ಹೋದ ಬ್ರಿಟನ್ ನ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್, ವಿಶ್ವದಲ್ಲಿ ಆರನೇ ಅತಿ ದೊಡ್ಡ ಜನಸಾಂದ್ರತೆ ಹೊಂದಿರುವ ದೇಶ ಭಾರತದಲ್ಲಿ ಉದ್ಯಮಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಇಲ್ಲಿಗೆ ಬಂದು ಒಂದು ವಿಷಯ ಅರ್ಥ ಮಾಡಿಕೊಂಡಿದ್ದೇನೆ ಅದೇನೆಂದರೆ ತಂತ್ರಜ್ಞಾನ ಮತ್ತು ನಾವಿನ್ಯತೆಯಲ್ಲಿ ಭಾರತ ಮುನ್ನಡೆಯುತ್ತಿದೆ ಎಂದು ಉದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರನ್ನೊಳಗೊಂಡ ಸಭಿಕರನ್ನುದ್ದೇಶಿಸಿ ಹೇಳಿದರು.

ಭಾರತೀಯರು ಹೊಸ ಹೊಸ ವಿಷಯಗಳಲ್ಲಿ ಸಂಶೋಧನೆ ಮಾಡುವುದು ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಸಿಹಿ ಸುದ್ದಿ. ಯುವ ಸಂಶೋಧಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರಿನ್ಸ್ ವಿಲಿಯಮ್ಸ್ ಹೇಳಿದರು.

ರಾಜಕುಮಾರ ಮತ್ತು ಯುವರಾಣಿ ಕೇಟೇ ಮಿಡ್ಲ್ ಟನ್ ನಿನ್ನೆ ಟೆಕ್ ರಾಕೆಟ್ ಶಿಪ್ ಪ್ರಶಸ್ತಿಯ ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು. ನಂತರ ಉದ್ಯಮಿಗಳ ಜೊತೆ ಸಂವಾದ ನಡೆಸಿದರು.

ನಂತರ 26/11ರ ಮುಂಬೈ ದಾಳಿಯ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದರು. ಸಚಿನ್ ತೆಂಡೂಲ್ಕರ್ ಹಾಗೂ ಅನಾಥ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದರು. ನಂತರ ರಾತ್ರಿ ನಡೆದ ಔತಣಕೂಟದಲ್ಲಿ ಬಾಲಿವುಡ್ ನ ನಟ-ನಟಿಯರುನ್ನು ಭೇಟಿ ಮಾಡಿದರು.

ಒಂದು ವಾರದ ಭಾರತ ಮತ್ತು ಭೂತಾನ್ ಭೇಟಿ ಕೈಗೊಂಡಿರುವ ದಂಪತಿ ನಿನ್ನೆ ವಾಣಿಜ್ಯ ನಗರಿ ಮುಂಬೈಯಿಂದ ತಮ್ಮ ಪ್ರವಾಸ ಆರಂಭಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com