
ಭುವನೇಶ್ವರ:ಒಡಿಶಾ ರಾಜ್ಯ ಸರ್ಕಾರ ನಕ್ಸಲ್ ನಿಗ್ರಹಕ್ಕೆ 13 ವರ್ಷಗಳಲ್ಲಿ 3 ,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಇಂಟಿಗ್ರೇಟೆಡ್ ಆಕ್ಷನ್ ಪ್ಲಾನ್, ಸುರಕ್ಷತಾ ಸಂಬಂಧಿ ವೆಚ್ಚ, ವಿಶೇಷ ಮೂಲ ಸೌಕರ್ಯ ಯೋಜನೆ, ಪೊಲೀಸ್ ಪಡೆಗಳ ಆಧುನೀಕರಣ, ಭಯೋತ್ಪಾದನಾ ನಿಗ್ರಹ ಕೇಂದ್ರಗಳ ಸ್ಥಾಪನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಒಡಿಶಾ ಸರ್ಕಾರ 13 ವರ್ಷಗಳಲ್ಲಿ 3 ,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಕೇಂದ್ರ ಸರ್ಕಾರ ಕಳಿಸಿದ್ದ ಸಿಆರ್ ಪಿಎಫ್ ಹಾಗೂ ಬಿಎಸ್ ಎಫ್ ಪಡೆಗಳ 9 ತುಕಡಿಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ನಿಯೋಜಿಸಲಾಗಿದೆ. ಇಂಟಿಗ್ರೇಟೆಡ್ ಆಕ್ಷನ್ ಪ್ಲಾನ್ ಅಡಿಯಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳಾದ ನುವಾಪಾಡ, ಬಲಂಗೀರ್ ಗೆ ಕಲಹಂಡಿ ಯಲ್ಲಿ 368 .72 ಕೋಟಿಗಳನ್ನು ಖರ್ಚು ಮಾಡಲಾಗಿದೆ. 2005 ರಿಂದ ಒಡಿಶಾದಲ್ಲಿ ನಕ್ಸಲ್ ವಿಧ್ವಂಸಕ ಕೃತ್ಯಗಳು ಕಡಿಮೆಯಾಗಿದೆ. ಅಧಿಕೃತ ಮಾಹಿತಿಗಳ ಪ್ರಕಾರ ನಕ್ಸಲರು ವಿಧ್ವಂಸಕ ಕೃತ್ಯ ನಡೆಸಿರುವ 919 ಪ್ರಕರಣಗಳು ವರದಿಯಾಗಿದ್ದು 184 ಭದ್ರತಾ ಸಿಬ್ಬಂದಿಗಳು, 259 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಭದ್ರತಾ ಸಿಬ್ಬಂದಿಗಳು ಕೈಗೊಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 152 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಒಡಿಶಾ ವಿಧಾನಸಭೆಯಲ್ಲಿ ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗಳನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನವೀನ್ ಪಟ್ನಾಯಕ್ ಮಾಹಿತಿ ನೀಡಿದ್ದಾರೆ.
Advertisement