ಕೊಲ್ಲಾಪುರ ಲಕ್ಷ್ಮಿ ದೇಗುಲ ಗರ್ಭಗುಡಿ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ

ಶನಿಶಿಂಗ್ಣಾಪುರ ದೇಗುಲ ವಿವಾದ ನಂತರ ಇದೀಗ ಕೊಲ್ಲಾಪುರ ಮಹಾಲಕ್ಷ್ಮಿ ದೇಗುಲದ ಗರ್ಭಗುಡಿ ಪ್ರವೇಶ ಮಾಡಲು ಮಹಿಳೆಯರಿಗೆ ಅನುಮತಿ ನೀಡಲಾಗಿದೆ ಎಂದು...
ಕೊಲ್ಲಾಪುರ ಮಹಾಲಕ್ಷ್ಮಿ ದೇಗುಲ
ಕೊಲ್ಲಾಪುರ ಮಹಾಲಕ್ಷ್ಮಿ ದೇಗುಲ
Updated on

ಕೊಲ್ಲಾಪುರ: ಶನಿಶಿಂಗ್ಣಾಪುರ ದೇಗುಲ ವಿವಾದ ನಂತರ ಇದೀಗ ಕೊಲ್ಲಾಪುರ ಮಹಾಲಕ್ಷ್ಮಿ ದೇಗುಲದ ಗರ್ಭಗುಡಿ ಪ್ರವೇಶ ಮಾಡಲು ಮಹಿಳೆಯರಿಗೆ ಅನುಮತಿ ನೀಡಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ.

ಶನಿಶಿಂಗ್ಣಾಪುರ ದೇಗುಲ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೇ ಬಾಂಬೆ ಹೈ ಕೋರ್ಟ್ ಐತಿಹಾಸಿಕ ತೀರ್ಪನ್ನು ಹೊರಹಾಕಿತ್ತು. ಪುರುಷರಂತೆಯೇ ಮಹಿಳೆಯರಿಗೂ ಹಕ್ಕಿದ್ದು, ಪುರುಷರು ಹೋಗುವ ಸ್ಥಳಗಳಿಗೆ ಮಹಿಳೆಯರಿಗೂ ಹೋಗುವ ಹಕ್ಕಿದೆ ಎಂದು ಹೇಳಿತ್ತು.

ಇದರಂತೆ ಶನಿಶಿಂಗ್ಣಾಪುರದ ನಂತರ ಕೆಲವು ಮಹಿಳಾ ಸಂಘಟನೆಗಳು ಕೊಲ್ಲಾಪುರ ಮಹಾಲಕ್ಷ್ಮಿ ದೇಗುಲದ ಗರ್ಭಗುಡಿಗೆ ಪ್ರವೇಶ ಮಾಡಲು ಅನುಮತಿ ನೀಡುವಂತೆ ಆಗ್ರಹಿಸಿದ್ದವು. ತದನಂತರ ದೇವಸ್ಥಾನ ಆಡಳಿತ ಮಂಡಳಿಯವರು ಮಹಿಳೆಯರು ಗರ್ಭಗುಡಿ ಪ್ರವೇಶಿಸಲು ಅನುಮತಿ ನೀಡಿದ್ದರು.

ಈ ಕುರಿತಂತೆ ಮಾತನಾಡಿರುವ ಜುನಾ ರಜ್ವಾಡ ಪೊಲೀಸ್ ಠಾಣೆಯ ಅಧಿಕಾರಿ ಅನಿಲ್ ದೇಶ್ ಮುಖ್ ಅವರು, ಹಲವು ಮಹಿಳಾ ಸಂಘಟನೆಗಳು ಹಾಗೂ ಮಹಾರಾಷ್ಟ್ರ ದೇವಸ್ಥಾನ ಸಮಿತಿಯವರನ್ನು ಕರೆದು ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ದೇವಸ್ಥಾನ ಸಮಿತಿಯ ಸದಸ್ಯರು ಮಹಿಳೆಯರು ಗರ್ಭಗುಡಿ ಪ್ರವೇಶ ಮಾಡಲು ನಮ್ಮಿಂದ ಯಾವುದೇ ವಿರೋಧವಿಲ್ಲ ಎಂದಿದ್ದರು. ಇದರಂತೆ ಮಹಿಳೆಯರು ಇಂದು ದೇವಸ್ಥಾನ ಗರ್ಭಗುಡಿ ಪ್ರವೇಶ ಮಾಡಿದ್ದು, ದೇವಿಗೆ ಪೂಜೆ ಸಲ್ಲಿಸಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com