ಹಂದ್ವಾರ ಹಿಂಸಾಚಾರ ಪ್ರಕರಣ: ರಾಜಕೀಯದಾಟಕ್ಕೆ ಬಲಿಯಾಯ್ತೆ ನಾಲ್ಕು ಜೀವ?

ಯೋಧನಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ಹಂದ್ವಾರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತಿರುವು ದೊರೆತಿದ್ದು, ಸ್ವತಃ ಯುವತಿಯೇ ಯೋಧರಿಂದ ಕಿರುಕುಳವಾಗಿಲ್ಲ ಎಂದು..
ಹಿಂಸಾಚಾರ ಪೀಡಿತ ಹಂದ್ವಾರ ಟೌನ್ (ಸಂಗ್ರಹ ಚಿತ್ರ)
ಹಿಂಸಾಚಾರ ಪೀಡಿತ ಹಂದ್ವಾರ ಟೌನ್ (ಸಂಗ್ರಹ ಚಿತ್ರ)
Updated on

ಶ್ರೀನಗರ: ಯೋಧನಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ಹಂದ್ವಾರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತಿರುವು ದೊರೆತಿದ್ದು, ಸ್ವತಃ ಯುವತಿಯೇ ಯೋಧರಿಂದ ಕಿರುಕುಳವಾಗಿಲ್ಲ  ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳೀಯ ರಾಜಕಾರಣಿಗಳು ಯುವತಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣವನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಂಡರೆ ಎಂಬ ಅನುಮಾನ ಕಾಡತೊಡಗಿದೆ. ಬೇಕೆಂದೇ ಯುವತಿ ಮಾಧ್ಯಮಗಳ  ಮುಂದೆ ಬಾರದಂತೆ ಸ್ಥಳೀಯ ರಾಜಕಾರಣಿಗಳು ತಡೆದರು ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಇನ್ನು ಯುವತಿಗೆ ಕಿರುಕುಳ ನೀಡಿದ ಯುವಕರ ರಕ್ಷಣೆಗಾಗಿ ಸೈನಿಕರ ಮೇಲೆ ವೃಥಾ  ಆರೋಪ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿವೆ.

ನಿನ್ನೆ ಸ್ವತಃ ಯುವತಿಯೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, "ಸೇನಾ ಬ೦ಕರ್ ಸಮೀಪದ ಶೌಚಗೃಹಕ್ಕೆ ತೆರಳಿ ಹಿ೦ದಿರುಗುವಾಗ ಯುವಕನೊಬ್ಬ ಹಲವರ ಜತೆ ತನ್ನ ಬಳಿಗಾಗಮಿಸಿ  ಕಪಾಳಕ್ಕೆ ಹೊಡೆದಿದ್ದಾನೆ. ನಾನು ಶೌಚಗೃಹದಲ್ಲಿ ಯೋಧನ ಜತೆ ಇದ್ದುದಾಗಿ ಅಶ್ಲೀಲ ಪದಗಳಿ೦ದ ಆ ಯುವಕರು ನಿ೦ದಿಸಿದರು. ಆದರೆ ಯಾವೊಬ್ಬ ಸೈನಿಕನೂ ನನದೆ ಲೈ೦ಗಿಕ ಕಿರುಕುಳ  ನೀಡಿಲ್ಲ' ಎ೦ದು ಸ೦ತ್ರಸ್ತೆ ಹೇಳಿದ್ದಾಳೆ.

ಇನ್ನು ಸೈನಿಕನೋರ್ವ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಸುಳ್ಳು ಆರೋಪ ಮಾಡಿ ನಡೆಸಲಾದ ಪ್ರತಿಭಟನೆಯಿಂದಾಗಿ ಈ ವರೆಗೂ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯ  ಯುವಕರು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಸೈನಿಕರ ಮೇಲೆ ಆರೋಪ ಮಾಡುವ ಮೂಲಕ ಹಂದ್ವಾರದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದ್ದಾರೆ. ಪ್ರಸ್ತುತ ಹಂದ್ವಾರದಲ್ಲಿ ಪರಿಸ್ಥಿತಿ  ಹತೋಟಿಗೆ ಬಂದಿದ್ದು, ಸ್ಥಳೀಯರು, ಪ್ರತಿಭಟನಾಕಾರುರು ಮತ್ತು ಭದ್ರತಾ ಸಿಬ್ಬಂದಿಗಳು ಸೇರಿ ಹಲವರಿಗೆ ಗಾಯಗಳಾಗಿವೆ.

ಮೋದಿ ಭೇಟಿಯಾದ ಮೆಹಬೂಬಾ
ಹ೦ದ್ವಾರ ಹಿಂಸಾಚಾರ ಪ್ರಕರಣ ಸಂಬಂಧ ಜಮ್ಮು ಮತ್ತು ಕಾಶ್ಮೀರದ ಮುಖ್ಯಮ೦ತ್ರಿ ಮೆಹಬೂಬಾ ಮುಫ್ತಿ ಬುಧವಾರ ಪ್ರಧಾನಿ ನರೇ೦ದ್ರ ಮೋದಿಯವರನ್ನು ಭೇಟಿಯಾಗಿದ್ದು, ಕಾನೂನು  ಸುವ್ಯವಸ್ಥೆ ಬಗ್ಗೆ ಚಚೆ೯ ನಡೆಸಿದ್ದಾರೆ. ಜತೆಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‍ರನ್ನೂ ಭೇಟಿಯಾಗಿದ್ದಾರೆ. ಈ ವೇಳೆ, ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ  ಕೈಗೊಳ್ಳಲಾಗುವುದು ಎ೦ದು ಪರಿಕ್ಕರ್ ಭರವಸೆ ನೀಡಿದ್ದಾರೆ. ಬಳಿಕ ಮಾತನಾಡಿದ ಮುಫ್ತಿ, ಇದೊ೦ದು ದುರದೃಷ್ಟಕರ ಘಟನೆ. ಶೀಘ್ರದಲ್ಲೇ ಅಪರಾಧಿಯನ್ನು ಪತ್ತೆ ಹಚ್ಚಿ ಶಿಕ್ಷೆಗೆ  ಒಳಪಡಿಸಲಾಗುವುದು ಎ೦ದಿದ್ದಾರೆ.

ಮೃತ ನಯೀಮ್ ಯುವ ಕ್ರಿಕೆಟಿ

 ಸೇನೆಯ ಗು೦ಡೇಟಿಗೆ ಮೃತಪಟ್ಟ ನಯೀಮ್ ಭಟ್ ಪ್ರತಿಭಾನ್ವಿತ ಕ್ರಿಕೆಟಿಗ ಎನ್ನಲಾಗಿದೆ. ಈತ 19 ವಷ೯ದೊಳಗಿನ ವಯೋಮಿತಿ ಕ್ರಿಕೆಟ್ ತ೦ಡದಲ್ಲಿದ್ದ. ಮೂರು ವಷ೯ಗಳ ಹಿ೦ದೆ ಅಖಿಲ  ಭಾರತ ಮಟ್ಟದ ಕ್ರಿಕೆಟ್ ಕೋಚಿ೦ಗ್ ಶಿಬಿರಕ್ಕೆ ಆಯ್ಕೆಯಾಗಿದ್ದ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com