ಪ್ರಧಾನಿಯಾಗುವ ಕನಸಿಗೆ ಬೆಂಬಲ ನೀಡದ ಕಾರಣ ಸೋನಿಯಾ ಮುಲಾಯಂ ವಿರುದ್ದವಾಗಿದ್ದಾರೆ: ಸ್ವಾಮಿ

ದೇಶದ ಪ್ರಧಾನಮಂತ್ರಿಯಾಗುವ ತಮ್ಮ ಕನಸಿಗೆ ಮುಲಾಯಂ ಸಿಂಗ್ ಅವರು ಬೆಂಬಲ ನೀಡದ ಕಾರಣ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾಗಾಂಧಿಯವರು ಮುಲಾಯಂ ಸಿಂಗ್ ವಿರುದ್ಧ...
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ನವದೆಹಲಿ; ದೇಶದ ಪ್ರಧಾನಮಂತ್ರಿಯಾಗುವ ತಮ್ಮ ಕನಸಿಗೆ ಮುಲಾಯಂ ಸಿಂಗ್ ಅವರು ಬೆಂಬಲ ನೀಡದ ಕಾರಣ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾಗಾಂಧಿಯವರು ಮುಲಾಯಂ ಸಿಂಗ್ ವಿರುದ್ಧ ಕಿಡಿಕಾರುತ್ತಿದ್ದಾರೆಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.

ನಿನ್ನೆಯಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿ ದೊಡ್ಡ ಬಾಂಬ್ ವೊಂದನ್ನು ಸಿಡಿಸಿದ್ದ ಹಂಸರಾಜ್ ಭಾರಧ್ವಾಜ್ ಅವರು ಸಮಾಜವಾದಿ ಪಕ್ಷದ ಪರಮೋಚ್ಛ ನಾಯಕರಾಗಿರುವ ಮುಲಾಂಯ್ ಸಿಂದ್ ಯಾದವ್ 2007ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಮೊದಲ ಅವಧಿಯ ಯುಪಿಎ ಸರ್ಕಾರ ಆಲೋಚನೆ ನಡೆಸಿತ್ತು. ಆದರೆ, ಈ ವಿಚಾರದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ದ್ವಂದ್ವ ಮನಸ್ಥಿಯಲ್ಲಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆ ಕುರಿತಂತೆ ಮಾತನಾಡಿರುವ ಸ್ವಾಮಿ ಅವರು, 1999ರಿಂದಲೂ ಮುಲಾಯಂ ಸಿಂಗ್ ಅವರು ಪ್ರಧಾನಮಂತ್ರಿಯಾಗಬೇಕೆಂಬ ಸೋನಿಯಾ ಅವರ ಆಸೆಗೆ ಬೆಂಬಲ ವ್ಯಕ್ತ ನೀಡಿಲ್ಲ. ಸೋನಿಯಾ ಗಾಂಧಿಯವರಿಗೆ ಮುಲಾಂಸಿಂಗ್ ಅವರನ್ನು ಯಾವಾಗಲೂ ಅನುಮಾನದಿಂದಲೇ ನೋಡುತ್ತಿದ್ದರು. ಸೋನಿಯಾ ಮುಲಾಯಂ ಅವರನ್ನು ದ್ವೇಷಿಸುತ್ತಿದ್ದರು ಎಂಬ ವಿಚಾರ ನನಗೆ ಆಶ್ಚರ್ಯವೇನು ತಂದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com