ಗುಜರಾತ್ ನಲ್ಲಿ ಮತ್ತೆ ಭುಗಿಲೆದ್ದ ಪಟೇಲ್ ಮೀಸಲು ಪ್ರತಿಭಟನೆ; ಹಿಂಸಾಚಾರ, ಕರ್ಫ್ಯೂ ಜಾರಿ

ಹಾರ್ದಿಕ್ ಪಟೇಲ್ ಬಂಧನ ನಂತರ ತಣ್ಣಗಾಗಿದ್ದ ಪಟೇಲ್ ಸಮುದಾಯ ಮೀಸಲಾತಿ ಪ್ರತಿಭಟನೆ ಮತ್ತೆ ಭುಗಿಲೆದ್ದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ...
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಅಹಮದಾಬಾದ್: ಪಟೇಲ್ ಸಮುದಾಯ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಬಂಧನ ನಂತರ ತಣ್ಣಗಾಗಿದ್ದ ಪಟೇಲ್ ಸಮುದಾಯ ಮೀಸಲಾತಿ ಪ್ರತಿಭಟನೆ ಮತ್ತೆ ಭುಗಿಲೆದ್ದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಮೆಹ್ಸಾನಾದಲ್ಲಿ ಪೊಲೀಸರು ಕರ್ಫ್ಯೂ ಜಾರಿ ಮಾಡಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಹಾರ್ದಿಕ್ ಪಟೇಲ್  ಹೋರಾಟ ಆರಂಭಿಸಿ, ಜೈಲು ಪಾಲಾಗಿದ್ದರು. ಇದೀಗ ಮತ್ತೆ ಪಟೇಲ್ ಸಮುದಾಯ ತೀವ್ರ ಹೋರಾಟ ನಡೆಸುತ್ತಿದೆ.

ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಸೂರತ್, ಮೆಹ್ಸಾನ ಹಾಗೂ ರಾಜ್ ಕೋಟ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪ್ರತಿಭಟನೆ ನಿರತರಾಗಿದ್ದ ಸುಮಾರು 435ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com