
ಕಣ್ಣೂರು: ಏ.10 ರಂದು ಕೊಲ್ಲಂನ ಪುತ್ತಿಂಗಲ್ ದೇವಿ ದೇಗುಲದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣ ಸಂಬಂಧ ರು.117 ಕೋಟಿ ನೆರವು ನೀಡುವಂತೆ ಕೇಂದ್ರದ ಬಳಿ ಕೇರಳ ರಾಜ್ಯ ಸರ್ಕಾರ ಮನವಿ ಮಾಡಿಕೊಳ್ಳಲಿದೆ ಎಂದು ಸೋಮವಾರ ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡುವ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರು, ಅಗ್ನಿ ದುರಂತದ ವೇಳೆ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಪರಿಹಾರ ನೀಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಹೀಗಾಗಿ ಕೇಂದ್ರದ ವತಿಯಿಂದ ನೆರವು ಕೋರಲು ಚಿಂತನೆ ನಡೆಸಲಾಗಿದೆ ಹೇಳಿದ್ದಾರೆ.
ಇನ್ನು ಪರಿಹಾರ ಸಂಬಂಧ ಈಗಾಗಲೇ ಮೂವರು ಸಚಿವ ಸಂಪುಟದ ಸದಸ್ಯರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಅದೂರ್ ಪ್ರಕಾಶ್, ವಿ.ಎಸ್. ಸಿಲ್ವಕುಮಾರ್ ಮತ್ತು ಶಿಬು ಬೇಬಿ ಜಾನ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ನಷ್ಟ ಕುರಿತಂತೆ ಮಾಹಿತಿ ಕಲೆಹಾಕಿದ್ದಾರೆ ಎಂದು ಹೇಳಿದ್ದಾರೆ.
Advertisement