ಅವಧಿಪೂರ್ವ ಚುನಾವಣೆಯನ್ನು ಖಚಿತಪಡಿಸಿದ ಆಸ್ಟ್ರೇಲಿಯಾ ಪ್ರಧಾನಿ

ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್, ಅವಧಿ ಪೂರ್ವ ಚುನಾವಣೆ ಎದುರಿಸುವುದನ್ನು ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್
ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್

ಕ್ಯಾನ್ಬೆರಾ: ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್, ಅವಧಿ ಪೂರ್ವ ಚುನಾವಣೆ ಎದುರಿಸುವುದನ್ನು ಸ್ಪಷ್ಟಪಡಿಸಿದ್ದಾರೆ.
ಜುಲೈ.2 ರಂದು ಆಸ್ಟ್ರೇಲಿಯಾದಲ್ಲಿ ಅವಧಿಪೂರ್ವ ಚುನಾವಣೆ ನಡೆಯಲಿದೆ. ಏ.18 ರಂದು ಆಸ್ಟ್ರೇಲಿಯಾದ ಮೇಲ್ಮನೆ, ಸೆನೆಟ್, ಸರ್ಕಾರದ ಒಂದು ಕಾನೂನಿನ ಕಾಯ್ದೆಯನ್ನು ಅಂಗೀಕರಿಸುವುದನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಡಬಲ್ ಡಿಸಲ್ಯೂಷನ್ ಎಲೆಕ್ಷನ್ ಗೆ ಕರೆ ನೀಡಿದ್ದಾರೆ. 
ಆಸ್ಟ್ರೇಲಿಯಾದಲ್ಲಿ ಸರ್ಕಾರದ ಕಾನೂನು ಕಾಯ್ದೆ ಮೇಲ್ಮನೆಯಲ್ಲಿ ಎರಡು ಬಾರಿ ತಿರಸ್ಕೃತಗೊಂಡರೆ ಸೆನೆಟ್( ಸಂಸತ್) ನ್ನು ವಿಸರ್ಜಿಸಿ ಚುನಾವಣೆ ಎದುರಿಸುವುದಕ್ಕೆ ಡಬಲ್ ಡಿಸಲ್ಯೂಷನ್ ಎಲೆಕ್ಷನ್ ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ಮೇ.3 ರಂದು ಬಜೆಟ್ ಮಂಡನೆಯಾದ ನಂತರ ಸಂಸತ್ ನ್ನು ವಿಸರ್ಜನೆ ಮಾಡುವಂತೆ ಗೌರ್ನರ್ ಗೆ ಮನವಿ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ತಿಳಿಸಿದ್ದಾರೆ.
ಸೆನೆಟ್ ನಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದೇ ಇದ್ದರೆ, ಜನಗಳೇ ತೀರ್ಮಾನ ಕೈಗೊಳ್ಳಲಿ ಎಂಬುದಕ್ಕಾಗಿ ಡಬಲ್ ಡಿಸಲ್ಯೂಷನ್ ಎಲೆಕ್ಷನ್ ಆಯ್ಕೆ ಮಾಡಿಕೊಂಡಿರುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ತಿಳಿಸಿದ್ದಾರೆ. ಚುನಾವಣೆ ಗೆದ್ದ ನಂತರ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತರುವುದಾಗಿ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com