ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ: 12 ವರ್ಷದ ಬಾಲಕಿ ಸಾವು

ದೇಶದೆಲ್ಲೆಡೆ ತೀವ್ರ ಬರಗಾಲ ತಲೆದೋರಿದ್ದು, ಮಹಾರಾಷ್ಟ್ಕದಲ್ಲಿ ನೀರು ತರಲು ಹೋಗಿದ್ದ 12 ಬಾಲಕಿಯೊಬ್ಬಳಿಗೆ ಹೃದಯಾಘಾತವಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಡ್(ಮಹಾರಾಷ್ಟ್ರ): ದೇಶದೆಲ್ಲೆಡೆ ತೀವ್ರ ಬರಗಾಲ ತಲೆದೋರಿದ್ದು, ಮಹಾರಾಷ್ಟ್ಕದಲ್ಲಿ ನೀರು ತರಲು ಹೋಗಿದ್ದ 12 ಬಾಲಕಿಯೊಬ್ಬಳಿಗೆ ಹೃದಯಾಘಾತವಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಯೋಗಿತಾ ಅಶೋಕ್ ದೇಸಾಯಿ (12) ಮೃತಪಟ್ಟ ಬಾಲಕಿ. ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಹ್ಯಾಂಡ್ ಪಂಪ್ ನಿಂದ ಬಾಲಕಿ ಮನೆಗೆ ನೀರು ತುಂಬಿಸುತ್ತಿದ್ದಳು. 4 ಬಾರಿ ಬಿಂದಿಗೆಯಿಂದ ನೀರನ್ನು ಹೊತ್ತು ತಂದಿದ್ದ ಬಾಲಕಿ 5ನೇ ಬಾರಿಗೆ ನೀರನ್ನು ಹೊತ್ತು ತರುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ.

ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಅಸುನೀಗಿದ್ದಾಳೆಂದು ತಿಳಿದುಬಂದಿದೆ.

ಬಾಲಕಿ ಸಾವಿಗೆ ಹೃದಯಾಘಾತ ಹಾಗೂ ನಿರ್ಜಲೀಕರಣ (ಡಿಹೈಡ್ರೇಷನ್) ಕಾರಣದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com