ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ (ಸಂಗ್ರಹ ಚಿತ್ರ)
ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ (ಸಂಗ್ರಹ ಚಿತ್ರ)

ಪ್ರಜಾಪ್ರಭುತ್ವದ ಪ್ರಸ್ತುತತೆಯನ್ನೇ ಬಿಜೆಪಿ ಪ್ರಶ್ನಿಸುತ್ತಿದೆ: ಕಾಂಗ್ರೆಸ್ ಟೀಕೆ

ಉತ್ತರಾಖಂಡ್ ನಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಡಳಿತದ ವಿರುದ್ಧ ಬಿಜೆಪಿ ಹಾಗೂ ಕೇಂದ್ರದ ಆಡಳಿತರೂಢ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಪ್ರಜಾಪ್ರಭುತ್ವದ ಪ್ರಸ್ತುತತೆಯನ್ನೇ...

ನವದೆಹಲಿ: ಉತ್ತರಾಖಂಡ್ ನಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಡಳಿತದ ವಿರುದ್ಧ ಬಿಜೆಪಿ ಹಾಗೂ ಕೇಂದ್ರದ ಆಡಳಿತರೂಢ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಪ್ರಜಾಪ್ರಭುತ್ವದ ಪ್ರಸ್ತುತತೆಯನ್ನೇ ಬಿಜೆಪಿ ಪ್ರಶ್ನಿಸುತ್ತಿದೆ ಎಂದು ಸೋಮವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು, ಉತ್ತರಾಖಂಡ್ ನಲ್ಲಿ ಹೇರಲಾಗಿರುವ ರಾಷ್ಟ್ರಪತಿ ಆಡಳಿತ ಅತ್ಯಂತ ಮುಖ್ಯವಾದ ವಿಚಾರ. ಈ ವಿಚಾರವನ್ನು ಚರ್ಚೆ ಮಾಡಲೇಬೇಕಿದೆ. ವಿಷಯ ನ್ಯಾಯಾಲಯಲದಲ್ಲಿದೆ ಎಂದು ಹೇಳಿದೆ ಬಿಜೆಪಿ ಇದರಿಂದ ನುಣುಚಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರಾಖಂಡ್ ವಿಚಾರ ಪ್ರಜಾಪ್ರಭುತ್ವದ ಪ್ರಸ್ತುತತೆ ವಿಚಾರವಾಗಿದ್ದು, ಪ್ರಜಾಪ್ರಭುತ್ವದ ಪ್ರಸ್ತುತತೆಯನ್ನೇ ಬಿಜೆಪಿ ಪ್ರಶ್ನಿಸುತ್ತಿದೆ. ಒಂದು ವೇಳೆ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿದ್ದರೆ. ಈ ವಿಚಾರವನ್ನು ಬಿಡುತ್ತಿರಲಿಲ್ಲ. ನ್ಯಾಯಾಲಯದಲ್ಲಿದ್ದರೂ ವಿಚಾರವನ್ನು ಚರ್ಚೆಗೆ ತರುತ್ತಿತ್ತು. ಹಾಗೆಯೇ ನಾವು ವಿಚಾರವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಉತ್ತರಾಖಂಡ್ ಬಿಕ್ಕಟ್ಟು ವಿಚಾರ ಕುರಿತಂತೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಉತ್ತರಾಖಂಡ್ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ, ಪ್ರಸ್ತುತ ಈ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ವಿಚಾರ ಸಂಬಂಧ ಚರ್ಚೆ ನಡೆಸಲು ಸಾಧ್ಯವಾಗುವಿಲ್ಲ ಎಂದು ಹೇಳಿದ್ದರು.

Related Stories

No stories found.

Advertisement

X
Kannada Prabha
www.kannadaprabha.com