ಪಠಾಣ್‌ಕೋಟ್ ಉಗ್ರ ದಾಳಿಯ ಮುಖ್ಯ ರೂವಾರಿ ಎಂದು ಹೇಳಲ್ಪಡುವ ಜೈಷೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ನ್ನು ಯುಎನ್ ಉಗ್ರರ ಪಟ್ಟಿಯಲ್ಲಿ ಸೇರಿಸಲು ಭಾರತ ಇಚ್ಛಿಸಿದೆ. ಉಗ್ರ ಸಂಟನೆಯಾದ ಅಲ್ ಖೈದಾವನ್ನು ಯುಎನ್ ಸೆಕ್ಯೂರಿಟಿ ಕೌನ್ಸಿಲ್ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಈ ವಿಷಯವನ್ನು ಉಲ್ಲೇಖಿಸಿದ ಭಾರತ ಜೈಷೆ ಮುಹಮ್ಮದ್ ಉಗ್ರನನ್ನೂ ಈ ಪಟ್ಟಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿದೆ.