ಮೊದಲ ಬಾರಿಗೆ ಪ್ರತ್ಯೇಕತಾವಾದಿಗಳನ್ನು ದೂರವಿಟ್ಟು ಭಾರತದೊಂದಿಗೆ ಮಾತುಕತೆ ನಡೆಸಿದ ಪಾಕ್!

ಬಹುಶಃ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಹುರಿಯತ್ ನ ಪ್ರತ್ಯೇಕತಾವಾದಿ ನಾಯಕರನ್ನು ಬದಿಗಿರಿಸಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ.
ಮೊದಲ ಬಾರಿಗೆ ಪ್ರತ್ಯೇಕತಾವಾದಿಗಳನ್ನು ದೂರವಿಟ್ಟು ಭಾರತದೊಂದಿಗೆ ಮಾತುಕತೆ ನಡೆಸಿದ ಪಾಕ್!
ಮೊದಲ ಬಾರಿಗೆ ಪ್ರತ್ಯೇಕತಾವಾದಿಗಳನ್ನು ದೂರವಿಟ್ಟು ಭಾರತದೊಂದಿಗೆ ಮಾತುಕತೆ ನಡೆಸಿದ ಪಾಕ್!

ನವದೆಹಲಿ: ಬಹುಶಃ  20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಹುರಿಯತ್ ನ ಪ್ರತ್ಯೇಕತಾವಾದಿ ನಾಯಕರನ್ನು ಬದಿಗಿರಿಸಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ.
ಏ.26 ರಂದು ನಡೆದ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರತ್ಯೇಕತಾವಾದಿ ನಾಯಕರನ್ನು ದೂರವಿಟ್ಟಿದ್ದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರತ್ಯೇಕತಾವಾದಿ ನಾಯಕ ಅಯಾಜ್ ಅಕ್ಬರ್, ಈ ಬಗ್ಗೆ ನೀವು ಪಾಕಿಸ್ತಾನದವರನ್ನೇ ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಪಾಕ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಭಾರತಕ್ಕೆ ಬಂದಿದ್ದರಾದರೂ, ಹುರಿಯತ್ ನಾಯಕರನ್ನು ಭೇಟಿಯಾಗಿಲ್ಲ. ಬಹುಶಃ  20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದ್ದು, ಹುರೀಯತ್ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದ್ದೇ ಈ ಹಿಂದೆ ಭಾರತ- ಪಾಕ್ ನಡುವಿನ ಮಾತುಕತೆ ರದ್ದುಗೊಳ್ಳಲು ಕಾರಣ ಎಂದು ಹುರಿಯತ್ ನಾಯಕ ಅಯಾಜ್ ಅಕ್ಬರ್ ಹೇಳಿದ್ದಾರೆ.
ಹುರಿಯತ್ ಕಾನ್ಫರೆನ್ಸ್  ಭಾರತ-ಪಾಕಿಸ್ತಾನ ನಡುವಿನ ಮಾತುಕತೆ ನಡೆಯುವುದನ್ನು ವಿರೋಧಿಸುತ್ತಿಲ್ಲ. ಭಾರತ- ಪಾಕಿಸ್ತಾನದ ನಡುವೆ ಉತ್ತಮ ಬಾಂಧವ್ಯ ಇರಬಾರದು ಎಂದು ನಾವು ಹೇಳಿಲ್ಲ. ಆದರೆ ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಕಾಶ್ಮೀರ ವಿವಾದ ಅಡ್ಡಿಯಾಗಿದ್ದು, ಕಾಶ್ಮೀರಿ ಜನತೆಯ ಆಕಾಂಕ್ಷೆಗಳಿಗೆ ಅನುಗುಣವಾಗಿ ವಿವಾದ ಬಗೆಹರಿಯಬೇಕು ಎಂದು ಅಯಾಜ್ ಅಕ್ಬರ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com