

ನವದೆಹಲಿ: ಭಾರತದ ಎಲ್ಲ ಮೂಲೆಗಳಿಂದ ನೆರೆದಿದ್ದ ಹೊಗೆಸೊಪ್ಪು ಬೇಸಾಯಗಾರರು ಮತ್ತು ಚಿಲ್ಲರೆ ಮಾರಾಟಗಾರರು, ಇತ್ತೀಚೆಗೆ ಜಾರಿಗೆ ತರಲಾಗಿರುವ ಹೊಗೆಸೊಪ್ಪು ಉತ್ಪನ್ನಗಳ ಪೊಟ್ಟಣದ ಶೇಕಡಾ ೮೫% ಭಾಗದಲ್ಲಿ ಎಚ್ಚರಿಕೆ ಚಿತ್ರವನ್ನು ಮುದ್ರಿಸುವ ನಿಯಮದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಹೊಗೆಸೊಪ್ಪು ಉತ್ಪನ್ನಗಳನ್ನು ಮಾರುವ ೭೨ ಲಕ್ಷ ಮಾರಾಟಗಾರರು, ಚಿಲ್ಲರೆ ಮಾರಾಟಗಾರರು ಮತ್ತು ಪಾನ್ ವಾಲಾಗಳನ್ನು ಪ್ರನಿಧಿಸುವ ಅಖಿಲ ಭಾರತೀಯ ಪಾನ್ ವಿಕ್ರೇತ ಸಂಘಟನ (ಎಬಿಪಿವಿಎಸ್) ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯಲ್ಲಿ ಭಾರತೀಯ ಪ್ರೆಸ್ ಕ್ಲಬ್ ನಿಂದ ಪಾರ್ಲಿಮೆಂಟ್ ವರಗೆ ಪ್ರತಿಭಟನಾ ನಡಿಗೆ ಆಯೋಜಿಸಲಾಗಿತ್ತು.
ದೊಡ್ಡ ಎಚ್ಚರಿಕೆ ಚಿತ್ರ ನಿಯಮವನ್ನು ಹಿಂಪಡೆಯುವಂತೆ ಆರೋಗ್ಯ ಸಚಿವಾಲಯ ಮತ್ತು ಪ್ರಧಾನ ಮಂತ್ರಿಯವರ ಕಾರ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ.
"ನಮ್ಮಂತಹ ಸಣ್ಣ ಚಿಲ್ಲರೆ ಮಾರಾಟಗಾರರು ಯಾವಾಗಲೂ ಬೆದರಿಕೆ ಚಿತ್ರಗಳನ್ನು ಸುತ್ತಲೂ ಅಂಟಿಸಿಕೊಂಡು ಕೂತಿರಬೇಕು ಎಂದು ಸರ್ಕಾರ ನಿರೀಕ್ಷಿಸುವುದೇಕೆ? ಇದು ಬಂಧು ಸದಸ್ಯರ ಹಾಗು ಕಷ್ಟದಲ್ಲಿರುವ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ನಾವು ಈ ಸಂದೇಶವನ್ನು ಒತ್ತಡದಿಂದ ಹೇರಲು ಇಷ್ಟವಿಲ್ಲ" ಎಂದು ಎಬಿಪಿವಿಎಸ್ ನ ಅಧ್ಯಕ್ಷ ರಾಮ್ ಆಶ್ರೆ ಮಿಶ್ರಾ ಹೇಳಿದ್ದಾರೆ.
"ಬಡ ಚಿಲ್ಲರೆ ಮಾರಾಟಗಾರರನ್ನು ರಕ್ಷಿಸುವಂತೆ ನಮ್ಮ ಮುಖಂಡರಿಗೆ ಆಗ್ರಹಿಸಿದ್ದೇವೆ" ಎಂದು ಕೂಡ ಮಿಶ್ರಾ ಹೇಳಿದ್ದಾರೆ.
ಇದರ ಹಿಂದೆ ಕೆಲವು ಎನ್ ಜಿ ಒ ಗಳ ಕೈವಾಡ ಇದೆ ಇದರ ಬಗ್ಗೆ ವಿವರವಾದ ತನಿಖೆ ಆಗಬೇಕು ಎಂದಿರುವ ಆವರು "ಸರ್ಕಾರ ಲಕ್ಷಾಂತರ ರೈತರು, ಕಾರ್ಖಾನೆ ನೌಕರರು, ಸಣ್ಣ ಚಿಲ್ಲರೆ ವ್ಯಾಪಾರಿಗಳು ಮತ್ತು ಅವರ ಮೇಲೆ ಅವಲಂಬಿತವಾದ ಕುಟುಂಬಗಳನ್ನು ನಿರ್ಲಕ್ಷಿಸಿದೆ" ಎಂದು ಕೂಡ ಮಿಶ್ರಾ ಹೇಳಿದ್ದಾರೆ.
ಸಂಸದೀಯ ಸಮಿತಿ ಎಚ್ಚರಿಕೆ ಚಿತ್ರಗಳನ್ನು ಪೊಟ್ಟಣದ ೫೦% ಇದ್ದರೆ ಸಾಕು, ೮೫% ನಿಯಮ ಹೊಗೆಸೊಪ್ಪು ಉದ್ದಿಮೆಗೆ ಅನ್ಯಾಯ ಮಾಡಿದಂತೆ ಎಂಬ ವರದಿ ನೀಡಿದ್ದರು, ಹೊಸ ನಿರ್ದೇಶನವನ್ನು ಏಪ್ರಿಲ್ ೧ ರಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ ನೀಡಿದೆ.