
ಕೊಲ್ಲಂ: ಖಾಸಗಿ ಟಿವಿ ವಾಹಿನಿಯೊಂದರ ಚರ್ಚೆ ವೇಳೆ ಎಡ ಪಕ್ಷದ ಅಭ್ಯರ್ಥಿ ಸಚಿವರ ಮೇಲೆ ಚೇರ್ ಮತ್ತು ಕಲ್ಲು ತೂರಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ಚಾನೆಲ್ ವೊಂದು ರಾಜಕಾರಣಿಗಳ ಜೊತೆ ಚರ್ಚೆ ನಡೆಸಿತ್ತು. ಈ ವೇಳೆ ಎಡರಂಗದ ಅಭ್ಯರ್ಥಿ ಎನ್.ಜಯನ್ ಕೇರಳ ಕಾರ್ಮಿಕ ಸಚಿವ ಶಿಬು ಬೇಬಿ ಜಾನ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜೊತೆಗೆ ಕುರ್ಚಿಯನ್ನು ಅವರ ಮೇಲೆ ಎಸೆದು ಹಲ್ಲೆ ಮಾಡಿದ್ದಾರೆ.
ಈ ವೇಳೆ ಅಲ್ಲಿದ್ದ ಜನ ಇಬ್ಬರ ಮೇಲೂ ಕಲ್ಲು ತೂರಾಟ ನಡೆಸಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಜಾನ್ ಅವರನ್ನು ಕೂಡಲೇ ಕೊಲ್ಲಂನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಜಾನ್ ವೃತ್ತಿಯಲ್ಲಿ ಎಂಜಿನಿಯರ್. ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ಅವರು ಈ ಹಿಂದೆ ಎರಡು ಬಾರಿ ಗೆಲುವು ಸಾಧಿಸಿರುವ ಚವರ ವಿಧಾನಸಭಾ ಕ್ಷೇತ್ರದ ಸ್ಪರ್ಧಿಸುತ್ತಿದ್ದಾರೆ.
ಅವರಿಗಿಂತಲೂ ಮೊದಲು ಜಾನ್ ಅವರ ತಂದೆ ಬೇಬಿ ಜಾನ್ ಚವರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು ಟ್ರೇಡ್ ಯೂನಿಯನ್ ನಾಯಕರು ಮತ್ತು ಸಚಿವರು ಸಹ ಆಗಿದ್ದರು.
Advertisement