ಭಾರತೀಯ ಎನ್.ಕೆ ಸಿಂಗ್ ಗೆ ಜಪಾನ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತ-ಜಪಾನ್ ಆರ್ಥಿಕ ಸಂಬಂಧ ವೃದ್ಧಿಗೆ ಶ್ರಮಿಸಿದ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಅಧಿಕಾರಿ, ರಾಜ್ಯಸಭಾ ಸದಸ್ಯ ಎನ್.ಕೆ ಸಿಂಗ್ ಅವರಿಗೆ ಜಪಾನ್ ಸರ್ಕಾರ ತನ್ನ...
ಎನ್ ಕೆ ಸಿಂಗ್
ಎನ್ ಕೆ ಸಿಂಗ್

ನವದೆಹಲಿ: ಭಾರತ-ಜಪಾನ್ ಆರ್ಥಿಕ ಸಂಬಂಧ ವೃದ್ಧಿಗೆ ಶ್ರಮಿಸಿದ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಅಧಿಕಾರಿ, ರಾಜ್ಯಸಭಾ ಸದಸ್ಯ ಎನ್.ಕೆ ಸಿಂಗ್ ಅವರಿಗೆ ಜಪಾನ್ ಸರ್ಕಾರ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಿದೆ.

ಅತ್ಯುನ್ನತ ಪ್ರಶಸ್ತಿ ದಿ ಆರ್ಡರ್ ಆಫ್ ದಿ ರೈಸಿಂಗ್ ಸನ್, ಗೋಲ್ಡ್ ಅಂಡ್ ಸಿಲ್ವರ್ ಸ್ಟಾರ್ ಪ್ರಶಸ್ತಿಯನ್ನು ಜಪಾನ್ ಪ್ರಧಾನಮಂತ್ರಿ ಶಿನಜೋ ಅಬೇ ಅವರು ಎನ್.ಕೆ ಸಿಂಗ್ ಅವರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಇದೇ ಮೇ 10 ರಂದು ಟೋಕಿಯೋದ ಇಂಪಿರಿಯಲ್ ಪ್ಯಾಲೆಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ಎನ್ ಕೆ ಸಿಂಗ್ ಅವರಿಗೆ ಜಪಾನ್ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಲಿದೆ.

ದಶಕಗಳಿಂದ ಜಪಾನ್ ಮತ್ತು ಭಾರತ ನಡುವಿನ ಆರ್ಥಿಕ ಸಂಬಂಧ ವೃದ್ಧಿಗಾಗಿ ವೇಗವರ್ಧಕ ಪಾತ್ರ ನಿರ್ವಹಿಸಿದ್ದ ಸಿಂಗ್ ಅವರ ಶ್ರಮವನ್ನು ಗುರುತಿಸಿ ಈ ಜಪಾನ್ ಸರ್ಕಾರ ಈ ಪ್ರಶಸ್ತಿ ನೀಡುತ್ತಿದೆ.

75 ವರ್ಷದ ಎನ್ ಕೆ ಸಿಂಗ್ ಅವರು ಸದ್ಯ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com