ಮೇಕೆ ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರ ದುರ್ಮರಣ

ಆಯತಪ್ಪಿ ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಲು ಹೋಗಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಘಟಾಮಾಪುರ್ ಗ್ರಾಮದಲ್ಲಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಾನ್ಪುರ: ಆಯತಪ್ಪಿ ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಲು ಹೋಗಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಘಟಾಮಾಪುರ್ ಗ್ರಾಮದಲ್ಲಿ ನಡೆದಿದೆ.

ಸುರೇಶ್ ಯಾದವ್ ಎಂಬುವರಿಗೆ ಸೇರಿದ ಮೇಕೆ ಗ್ರಾಮದಲ್ಲಿದ್ದ ಆಳವಾದ ಬಾವಿಗೆ ಬಿದ್ದಿದೆ. ಇದನ್ನು ನೋಡಿದ 17 ವರ್ಷದ ಬಾಲಕ ಮೇಕೆಯನ್ನು ರಕ್ಷಿಸಲು ಶಿವಂ ಬಾವಿಗೆ ಹಾರಿದ್ದಾನೆ.
ಆದರೆ ಆತ ಹೊರಗೆ ಬಾರದಿದ್ದಾಗ ಯಾದನ್ ಮತ್ತು ಆತನ ಸಹೋದರ ಕೂಡ ಬಾವಿಗೆ ಹಾರಿದ್ದಾರೆ.

ಮೂವರು ಹೊರಬಾರದ್ ಇದ್ದುದ್ದನ್ನು ನೋಡಿದ ಸ್ಥಳೀಯರುಪ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೂವರ ಶವಗಳನ್ನು ಹೊರತೆಗೆದಿದ್ದಾರೆ. ಬಾವಿಯೊಳಗಿನ ವಿಷಯುಕ್ತ ಗಾಳಿ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com