ಶ್ರೀನಗರ ಪರ್ರಯಪೊರ ಪ್ರದೇಶದಲ್ಲಿರುವ ನಯೀಂ ಅಖ್ತರ್ ಅವರ ನಿವಾಸದ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ದಾಳಿಯಿಂದ ಮನೆಯ ಮುಖ್ಯದ್ವಾರಕ್ಕೆ ಸ್ವಲ್ಪ ಹಾನಿಯಾಗಿದೆ. ಆದರೆ ಯಾರಿಗೆ ತೊಂದರೆಯಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಅಖ್ತರ್ ಮತ್ತು ಅವರ ಪತ್ನಿ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.