ಚೀನಾ ಯೋಜನೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ

46 ಶತಕೋಟಿ ಡಾಲರ್ ಮೊತ್ತದ ಮಹಾತ್ವಾಕಾಂಕ್ಷಿ ಚೀನಾ-ಪಾಕಿಸ್ತಾನ ನಡುವಣ ಆರ್ಥಿಕ ಕಾರಿಡಾರ್ ನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 46 ಶತಕೋಟಿ ಡಾಲರ್ ಮೊತ್ತದ ಮಹಾತ್ವಾಕಾಂಕ್ಷಿ ಚೀನಾ-ಪಾಕಿಸ್ತಾನ ನಡುವಣ ಆರ್ಥಿಕ ಕಾರಿಡಾರ್ ನ ಪರಿಸ್ಥಿತಿಯನ್ನು ಭಾರತ ಅತ್ಯಂತ ನಿಕಟವಾಗಿ ಗಮನಿಸುತ್ತಿದೆ. ಈ ಯೋಜನೆಗೆ ಸ್ಥಳೀಯರಿಂದ ಭೂಮಿ ಪಡೆದುಕೊಂಡದ್ದಕ್ಕೆ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಚೀನಾ-ಪಾಕಿಸ್ತಾನಗಳ ಗಿಲ್ಗಿಟ್-ಬಲ್ಟಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
3 ಸಾವಿರ ಕಿಲೋ ಮೀಟರ್ ಉದ್ದದ ಆರ್ಥಿಕ ಕಾರಿಡಾರ್ ಗೆ ಗಿಲ್ಗಿಟ್-ಬಲ್ಟಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಆರ್ಥಿಕ ಕಾರಿಡಾರ್ ರಸ್ತೆಗಳು, ರೈಲ್ವೆ ಮಾರ್ಗ ಮತ್ತು ಪಶ್ಚಿಮ ಚೀನಾದಿಂದ ದಕ್ಷಿಣ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಪೈಪ್ ಮಾರ್ಗವನ್ನು ಒಳಗೊಂಡಿದೆ.
ಈ ಕುರಿತು ಭಾರತ ಸರ್ಕಾರ ಅಧಿಕೃತ ಹೇಳಿಕೆ ನೀಡದಿದ್ದರೂ ಕೂಡ ಅಧಿಕಾರಿಯೊಬ್ಬರು, ''ನಾವು ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಹಸನದಂಥ ಮತದಾನ ಮೂಲಕ ಪಾಕಿಸ್ತಾನ ಎಂದಿನಂತೆ ತನ್ನ ಅಕ್ರಮ ವ್ಯವಹಾರವನ್ನು ಮುಂದುವರಿಸಲು ನೋಡುತ್ತಿದೆ. ಆದರೆ ವಾಸ್ತವ ಬೇರೆಯಾಗಿದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com