ಉಗ್ರ ದಾಳಿ ಭೀತಿ: ತಿರುಮಲದಲ್ಲಿ ಅಧಿಕಾರಿಗಳಿಂದ ವ್ಯಾಪಕ ಶೋಧ

ವಿಶ್ವವಿಖ್ಯಾತ ತಿರುಪತಿ-ತಿರುಮಲ ದೇವಾಲಯದ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ತಿರುಮಲದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ತಿರುಪತಿ ತಿರುಮಲ ದೇವಾಲಯ (ಸಂಗ್ರಹ ಚಿತ್ರ)
ತಿರುಪತಿ ತಿರುಮಲ ದೇವಾಲಯ (ಸಂಗ್ರಹ ಚಿತ್ರ)

ತಿರುಮಲ: ವಿಶ್ವವಿಖ್ಯಾತ ತಿರುಪತಿ-ತಿರುಮಲ ದೇವಾಲಯದ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ತಿರುಮಲದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಈ ಹಿಂದೆ ದಾಳಿ ಕುರಿತು ಮಾಹಿತಿ ನೀಡಿದ್ದ ಗುಪ್ತಚರ ಇಲಾಖೆ ಉತ್ತರ ಭಾರತೀಯರ ಸೋಗಿನಲ್ಲಿ ಉಗ್ರರು ಆಗಮಿಸುವ ಕುರಿತು ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ ಇಂದು  ತಿರುಮಲದಾದ್ಯಂತ ಇರುವ ಹೊಟೆಲ್, ರೆಸ್ಟೋರೆಂಟ್ ಮತ್ತು ಲಾಡ್ಜ್ ಗಳ ಮೇಲೆ ದಾಳಿ ಮಾಡಿರುವ ಭದ್ರತಾ ಅಧಿಕಾರಿಗಳು ಅಲ್ಲಿರುವ ಸಿಬ್ಬಂದಿಗಳ ಪೂರ್ವಾಪರ ವಿಚಾರಣೆ ನಡೆಸಿದ್ದಾರೆ.  ಅಲ್ಲದೆ ಸಿಬ್ಬಂದಿಗಳ ಆಧಾರ್ ಕಾರ್ಡ್ ಮತ್ತು ಇತರೆ ದಾಖಲೆಗಳ ಪರಿಶೀಲನೆ ನಡೆಸಿದ್ದು, ನೌಕರರ ವಿವರ ನೀಡುವಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಸ್ಥಳೀಯರು ಹಾಗೂ ಭದ್ರತಾ ಅಧಿಕಾರಿಗಳು ಹೊಟೆಲ್, ರೆಸ್ಟೋರೆಂಟ್ ಮತ್ತು ಲಾಡ್ಜ್ ಗಳಲ್ಲಿ ಅಕ್ರಮವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರ  ಪೂರ್ವಾಪರ ವಿಚಾರಿಸದೇ, ದಾಖಲಾತಿಗಳಿಲ್ಲದೇ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇಂತಹ ಸಿಬ್ಬಂದಿಗಳಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ  ಇಂದು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಅಂತೆಯೇ ತಿರುಮಲ ದೇವಾಸ್ಥಾನದ ಬಳಿ ನಿಯೋಜಿಸಲಾಗಿರುವ ಎನ್ ಎಸ್ ಜಿ ಭದ್ರತಾ ಪಡೆಯ ಸಂಖ್ಯೆಯನ್ನೂ ಕೂಡ ಹೆಚ್ಚಳ ಮಾಡಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com