ತಮಿಳುನಾಡಿನಲ್ಲಿ ಭೀಕರ ಅಪಘಾತ: 9 ಮಂದಿ ದುರ್ಮರಣ

ತಮಿಳುನಾಡಿನ ತಿರುಚ್ಚಿಯ ಮನಪ್ಪರೈನ ವಲಂದು ಕೈಕಟ್ಟಿ ಗ್ರಾಮದ ಬಳಿ ಮಿನಿ ವ್ಯಾನ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ದುರ್ಮರಣ ಹೊಂದಿದ್ದಾರೆ...
ಅಪಘಾತ
ಅಪಘಾತ
Updated on

ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯ ಮನಪ್ಪರೈನ ವಲಂದು ಕೈಕಟ್ಟಿ ಗ್ರಾಮದ ಬಳಿ ಮಿನಿ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ದುರ್ಮರಣ ಹೊಂದಿದ್ದಾರೆ.

ಕುಟುಂಬದ ಪೂಜಾ ಸಮಾರಂಭವೊಂದಕ್ಕೆ 65 ಸಂಬಂಧಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಲಾರಿ ಮಧುರೈ-ತಿರುಚ್ಛಿ ರಾಷ್ಟ್ರೀಯ ಹೆದ್ದಾರಿ ಬಳಿ ಬರುತ್ತಿದ್ದಂತೆ ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಲ್ಲಿ ಸ್ಥಳದಲ್ಲೇ 7 ಮಂದಿ ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು 30ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ದಿಂಡಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾಧಿಕಾರಿ ಕೆಎಸ್ ಪಳನಿಸ್ವಾಮಿ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com