ನವದೆಹಲಿ: ಬೆಂಗಳೂರಿನಲ್ಲಿ ಸೇನೆ ವಿರುದ್ಧ ಘೋಷಣೆ ಕೂಗಿದ್ದ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕ, ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಪ್ರತಿಕ್ರಿಯೆ ನೀಡಿದ್ದು, ನೀವು ಬೆಂಗಳೂರಿಗೆ ಬಂದಿರುವುದು ವಿದ್ಯಾಭ್ಯಾಸಕ್ಕಾಗಿ, ಓದಿನತ್ತ ಗಮನ ಹರಿಸಿ ಕಾಶ್ಮೀರಿ ರಾಜಕಾರಣಕ್ಕೆ ಇನ್ನೂ ಸಮಯವಿದೆ ಎಂದು ಹೇಳಿದ್ದಾರೆ.
ಕಾಶ್ಮೀರಿ ಯುವಕರು ಬೆಂಗಳೂರಿಗೆ ಬಂದಿರುವುದು ವಿದ್ಯಾಭ್ಯಾಸಕ್ಕಾಗಿ, ಮೊದಲು ವಿದ್ಯಾಭ್ಯಾಸ ಪೂರ್ಣಗೊಳಿಸಿ ಒಳ್ಳೆಯ ಕೆಲಸ ಪಡೆದುಕೊಳ್ಳಿ, ಕಾಶ್ಮೀರ ರಾಜಕಾರಣದ ಬಗ್ಗೆ ಯೋಚಿಸಲು ನಿಮಗೆ ಇನ್ನೂ ಸಮಯವಿದೆ ಎಂದು ಕಾಶ್ಮೀರಿ ಯುವಕರಿಗೆ ಗುಲಾಂ ನಬಿ ಆಜಾದ್ ಕಿವಿ ಮಾತು ಹೇಳಿದ್ದಾರೆ. ಕಾಶ್ಮೀರದಲ್ಲಿ ಒಂದು ತಿಂಗಳಿನಿಂದ ಜಾರಿಯಲ್ಲಿರುವ ಕರ್ಫ್ಯೂ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದೇನೆ, ಕಾಶ್ಮೀರಿ ಯುವಕರು ಬೆಂಗಳೂರಿನಲ್ಲಿ ಕಾಶ್ಮೀರದ ವಿಚಾರವಾಗಿ ಘೋಷಣೆ ಕೂಗುವುದು ಸರಿಯಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
Advertisement