ನಾಳೆ ಬೆಳಗ್ಗೆ ದಕ್ಷಿಣ ಮುಂಬೈನ ರಸೂಲ್ ಮಸೀದಿಯಲ್ಲಿ ಮೆಮೋನ್ ಕುಟುಂಬಕ್ಕೆ ಸೇರಿದ ಆಯೆಷಾ ನಗಾನಿ ಜತೆಗೆ ಅಲಿಶಾ ಪಾರ್ಕರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಸಂಜೆ ಜುಹುವಿನಲ್ಲಿರುವ ಟ್ಯುಲಿಪ್ ಸ್ಟಾರ್ ಹೊಟೇಲ್‌ನಲ್ಲಿ ಸತ್ಕಾರ ಕೂಟ ಆಯೋಜಿಸಲಾಗಿದೆ. ಮುಂಬೈಯಲ್ಲಿ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿರುವ ಅಲಿಶಾ, ತಾಯಿ ಹಸೀನಾ ಅವರ ಬದುಕುಳಿದಿರುವ ಏಕೈಕ ಪುತ್ರನಾಗಿದ್ದಾನೆ.