ಬುಲಂದ್ ಶಹರ್ ಪ್ರಕರಣ: ಆರೋಪಿ 50 ಗ್ಯಾಂಗ್ ರೇಪ್, ಡಕಾಯಿತಿಗಳಲ್ಲಿ ಭಾಗಿ

ಆರು ಆರೋಪಿಗಳು ಇದುವರೆಗೂ 50 ಸಾಮೂಹಿಕ ಅತ್ಯಾಚಾರ ಮತ್ತ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬುಲಂದ್ ಶಹರ್ : ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಆರು ಆರೋಪಿಗಳ ವಿಚಾರಣೆ ವೇಳೆ ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ.

ಆರು ಆರೋಪಿಗಳು ಇದುವರೆಗೂ 50 ಸಾಮೂಹಿಕ ಅತ್ಯಾಚಾರ ಮತ್ತ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಜೂನ್ 30 ರಂದು ರಾಜಸ್ತಾನದ  ಹನುಮನಗರ್ ನಲ್ಲಿ ಯುವತಿಯನ್ನು ಅತ್ಯಾಚಾರ ಮಾಡಲಾಯಿತು. ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೇ ಆಕೆಯ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದರಿಂದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು ಎಂದು ಪ್ರಮುಖ ಆರೋಪಿ ಸಲೀಮ್ ಬವಾರಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಜುಲೈ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ 91 ರಲ್ಲಿ ನಾಲ್ಕು ಡಕಾಯಿತಿಗಳನ್ನು ಮಾಡಲಾಯಿತು. ಕೇವಲ ಉತ್ತರ ಪ್ರದೇಶ ಮಾತ್ರವಲ್ಲದೇ ರಾಜಸ್ತಾನ, ಬಿಹಾರ, ಉತ್ತರಾಖಂಡ್ ಮತ್ತು ಛತ್ತೀಸ್ ಗಢದಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಪಾಲ್ಗೋಂಡಿರುವುದಾಗಿ ಈ ಗ್ಯಾಂಗ್ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಜುಲೈ 29 ರಂದು ಬುಲಂದ್ ಶಹರ್ ನ ರಾಷ್ಟ್ರೀಯ ಹೆದ್ದಾರಿ -91 ರಲ್ಲಿ 13 ವರ್ಷದ ಬಾಲಕಿ ಮತ್ತು ಆಕೆಯ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com