ತ.ನಾಡು ವಿಧಾನಸಭೆ ಕೋಲಾಹಲ: ಸ್ಟಾಲಿನ್ ಸೇರಿದಂತೆ ಡಿಎಂಕೆ ಶಾಸಕರ ವಿರುದ್ಧ ಎಫ್ ಐಆರ್

ವಿಧಾನಸಭೆ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿ, ಕಲಾಪಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಸೇರಿದಂತೆ 60 ಮಂದಿ ಡಿಎಂಕೆ ಶಾಸಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಡಿಎಂಕೆ ಸದಸ್ಯರ ವಿರುದ್ಧ  ಎಫ್ ಐಆರ್ (ಸಂಗ್ರಹ ಚಿತ್ರ)
ಡಿಎಂಕೆ ಸದಸ್ಯರ ವಿರುದ್ಧ ಎಫ್ ಐಆರ್ (ಸಂಗ್ರಹ ಚಿತ್ರ)

ಚೆನ್ನೈ: ವಿಧಾನಸಭೆ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿ, ಕಲಾಪಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಸೇರಿದಂತೆ 60 ಮಂದಿ ಡಿಎಂಕೆ ಶಾಸಕರ  ವಿರುದ್ಧ ಎಫ್ ಐಆರ್ ದಾಖಲಾಗಿದೆ.

ತಮಿಳುನಾಡು ಸಚಿವಾಲಯದಲ್ಲಿ ಪ್ರತಿಭಟನೆ ಹಾಗೂ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪ್ರಧಾನ ಪ್ರತಿಪಕ್ಷ ಡಿಎಂಕೆಯ ನಾಯಕ ಎಂ.ಕೆ. ಸ್ಟಾಲಿನ್ ಸೇರಿದಂತೆ ಮಂದಿ 60 ಡಿಎಂಕೆ  ಶಾಸಕರ ವಿರುದ್ಧ ತಮಿಳುನಾಡು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವಿಧನಾಸಭೆಯಿಂದ ತಮ್ಮನ್ನು ಅಮಾನತುಗೊಳಿಸಿದ ಬಳಿಕ ಸಿಟ್ಟಿಗೆದ್ದಿದ್ದ ಡಿಎಂಕೆ ಶಾಸಕರು ತಮಿಳುನಾಡು  ಸಚಿವಾಲಯದಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಪೊಲೀಸರು ಹಾಗೂ ಡಿಎಂಕೆ ಶಾಸಕರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಶಾಸಕರ ವಿರುದ್ಧ ಎಫ್ ಐಆರ್  ದಾಖಲಿಸಿಕೊಂಡಿದ್ದಾರೆ.  ಶಾಸಕರ ವಿರುದ್ಧ ಕೇಸು ದಾಖಲಿಸಿರುವ ಪೊಲೀಸರ ಕ್ರಮವನ್ನು ಡಿಎಂಕೆ ಖಂಡಿಸಿದೆ.

ವಿಧಾನ ಸಭೆ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಳೆದ ಬುಧವಾರ ವಿಧಾನ ಸಭಾದ್ಯಕ್ಷರು 88 ಡಿಎಂಕೆ ಶಾಸಕರನ್ನು ಒಂದುವಾರ ಅವಧಿಗೆ ಅಮಾನತು ಮಾಡಿದ್ದರು. ಈ ವೇಳೆ  ಅಧಿಕಾರಿಗಳು ವಿಧಾನ ಸಭೆಯಲ್ಲಿ ಅಮಾನತುಗೊಂಡ ಶಾಸಕರ ಕೋಣೆಗಳಿಗೆ ಬೀಗ ಜಡಿದಿದ್ದರು. ಇದರಿಂದ ಸಿಟ್ಟಿಗೆದ್ದ ಡಿಎಂಕೆ ಶಾಸಕರು ಗುರುವಾರ ಹಾಗೂ ಶುಕ್ರವಾರ ಸಚಿವಾಲಯ  ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com