
ಚಂಡೀಗಢ: ಗೋರಕ್ಷಣೆ ಹೆಸರಿನಲ್ಲಿ ಸುಲಿಗೆ, ಹಲ್ಲೆ ನಡೆಸುತ್ತಿದ್ದ ಆರೋಪದಲ್ಲಿ ಪಂಜಾಬ್ ಮೂಲದ ಗೋರಕ್ಷಕನೊಬ್ಬನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ಬಂಧಿತ ನಕಲಿ ಗೋರಕ್ಷಕನನ್ನು ಸತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಹಲ್ಲೆ ನಡೆಸಿದ, ಲೂಟಿ ಮಾಡಿರುವ ಆರೋಪಗಳಿವೆ. ಗೋರಕ್ಷಣೆ ಹೆಸರಿನಲ್ಲಿ ಸತೀಶ್ ಕುಮಾರ್ ನೇತೃತ್ವದ ಸಂಘಟನೆ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ, ಲೂಟಿ ನಡೆಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸತೀಶ್ ಕುಮಾರ್ ಸಂಘಟನೆಯ ಸದಸ್ಯರು ಗೋರಕ್ಷಣೆಯ ವೇಳೆ ಜನರನ್ನು ಥಳಿಸುತ್ತಿದ್ದ ವಿಡಿಯೋ ಬಹಿರಂಗವಾಗಿದೆ. ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸತೀಶ್ ಕುಮಾರ್ ನ್ನು ಬಂಧಿಸಲಾಗಿದೆ.
Advertisement