ಫೆಟೊ ಭಾರತದೊಳಗೆ ಅಕ್ರಮವಾಗಿ ನುಸುಳಿದೆ: ಟರ್ಕಿ ವಿದೇಶಾಂಗ ಸಚಿವ

ಫೆತುಲ್ಹಾ ಗುಲೆನ್ ಭಯೋತ್ಪಾದಕ ಸಂಘಟನೆ(ಫೆಟೊ)ಭಾರತದ ಒಳಗೆ ಅಕ್ರಮವಾಗಿ ನುಸುಳಿದೆ ...
ಟರ್ಕಿ ಮತ್ತು ಭಾರತದ ವಿದೇಶಾಂಗ ಸಚಿವರು ದೆಹಲಿಯಲ್ಲಿ.
ಟರ್ಕಿ ಮತ್ತು ಭಾರತದ ವಿದೇಶಾಂಗ ಸಚಿವರು ದೆಹಲಿಯಲ್ಲಿ.
Updated on: 
 ನವದೆಹಲಿ: ಫೆತುಲ್ಹಾ ಗುಲೆನ್ ಭಯೋತ್ಪಾದಕ ಸಂಘಟನೆ(ಫೆಟೊ)ಭಾರತದ ಒಳಗೆ ಅಕ್ರಮವಾಗಿ ನುಸುಳಿದೆ ಎಂದು ಟರ್ಕಿಯ ವಿದೇಶಾಂಗ ಸಚಿವ ಮೆವ್ಲುಟ್ ಕವುಸೊಗ್ಲು ಹೇಳಿದ್ದಾರೆ.
ಫೆಟೊ ರಹಸ್ಯ ಅಪರಾಧ ಅಂತಾರಾಷ್ಟ್ರೀಯ ಸಂಪರ್ಕ ಜಾಲವಾಗಿದ್ದು, ವಿಶ್ವಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಸಂಘ-ಸಂಸ್ಥೆಗಳು ಮತ್ತು ಶಾಲೆಗಳ ಸಹಾಯದಿಂದ ಈ ಭಯೋತ್ಪಾದಕ ಸಂಘಟನೆ ಭಾರತದ ಒಳಗೆ ಕೂಡ ನುಗ್ಗಿದೆ ಎಂದು ಅದು ಹೇಳಿದೆ.
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ನಾನು ಈ ವಿಷಯವನ್ನು ಸಚಿವೆಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ಭಾರತ ಭೇಟಿಯಲ್ಲಿರುವ ಅವರು, ಎಲ್ಲಾ ದೇಶಗಳಲ್ಲಿಯೂ ಫೆಟೊ ತನ್ನ ಅಸ್ತಿತ್ವವನ್ನು ಹೊಂದಿದೆ, ತಮ್ಮ ದೇಶದಿಂದ ಹೊಡೆದೋಡಿಸಲು ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದು ಕೇಳಿಕೊಂಡಿರುವುದಾಗಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com