ಟರ್ಕಿ: ಕಲ್ಯಾಣ ಮಂಟಪ ಸಮೀಪ ಬಾಂಬ್ ಸ್ಪೋಟ: 30 ಸಾವು

ಟರ್ಕಿಯ ಗಜಿಯನ್ ಟೆಪ್ ಪ್ರದೇಶದಲ್ಲಿ ಕಲ್ಯಾಣಮಂಟಪ ಬಳಿ ಬಾಂಬ್ ಸ್ಫೋಟಗೊಂಡಿದ್ದು ಪರಿಣಾಮ 30 ಜನ ಮೃತಪಟ್ಟಿದ್ದು 90ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ...
ಬಾಂಬ್ ದಾಳಿ
ಬಾಂಬ್ ದಾಳಿ

ಅಂಕರಾ: ಟರ್ಕಿಯ ಗಜಿಯನ್ ಟೆಪ್ ಪ್ರದೇಶದಲ್ಲಿ ಕಲ್ಯಾಣಮಂಟಪ ಬಳಿ ಬಾಂಬ್ ಸ್ಫೋಟಗೊಂಡಿದ್ದು ಪರಿಣಾಮ 30 ಜನ ಮೃತಪಟ್ಟಿದ್ದು 90ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.

ಟರ್ಕಿ ಸರ್ಕಾರ ಇದೊಂದು ಭಯೋತ್ಪಾದಕ ದಾಳಿ ಎಂದು ಹೇಳಿದೆ. ಇನ್ನು ದಾಳಿಯಲ್ಲಿ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿದ್ದು ಮೃತರ ಸಂಖ್ಯೆ ಏರಿಕೆಯಾಗಿದೆ ಸಾಧ್ಯತೆ ಇದೆ.

ಈ ಪ್ರದೇಶ ಕುರ್ದಿಶ್ ಸಮುದಾಯದ ಪ್ರಬಲ್ಯ ಹೊಂದಿದ್ದು, ಸ್ಥಳೀಯ ನಿವಾಸಿಗಳು ಇಲ್ಲಿ ಮದುವೆ ಸಮಾರಂಭವನ್ನು ಆಯೋಜಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com