ಸೇನೆಯ ಆಧುನೀಕರಣಕ್ಕೆ 223 ಬಿಲಿಯನ್ ಡಾಲರ್ ಖರ್ಚು ಮಾಡಲಿರುವ ಕೇಂದ್ರ ಸರ್ಕಾರ

ಭಾರತ ಸರ್ಕಾರ ಸೇನಾ ಸನ್ನದ್ಧನತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳ ಖರೀದಿಗಾಗಿ ಮುಂದಿನ 10 ವರ್ಷಗಳಲ್ಲಿ 223 ಬಿಲಿಯನ್ ಡಾಲರ್ ನಷ್ಟು ಖರ್ಚು ಮಾಡಲಿದೆ.
ಸೇನೆಯ ಆಧುನೀಕರಣಕ್ಕೆ 223 ಬಿಲಿಯನ್ ಡಾಲರ್ ಖರ್ಚು ಮಾಡಲಿರುವ ಕೇಂದ್ರ ಸರ್ಕಾರ
ಸೇನೆಯ ಆಧುನೀಕರಣಕ್ಕೆ 223 ಬಿಲಿಯನ್ ಡಾಲರ್ ಖರ್ಚು ಮಾಡಲಿರುವ ಕೇಂದ್ರ ಸರ್ಕಾರ

ನವದೆಹಲಿ: ಭಾರತ ಸರ್ಕಾರ ಸೇನಾ ಸನ್ನದ್ಧನತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳ ಖರೀದಿಗಾಗಿ ಮುಂದಿನ 10 ವರ್ಷಗಳಲ್ಲಿ 223 ಬಿಲಿಯನ್ ಡಾಲರ್ ನಷ್ಟು ಖರ್ಚು ಮಾಡಲಿದೆ.

ಶಸ್ತ್ರಾಸ್ತ್ರಗಳ ವ್ಯವಸ್ಥೆಯಲ್ಲಿ ಸುಮಾರು 500 ಹೆಲಿಕಾಫ್ಟರ್ ಗಳು, 12  ಜಲಾಂತರ್ಗಾಮಿ ನೌಕೆಗಳು, 100 ಸಿಂಗಲ್ ಇಂಜಿನ್ ಫೈಟರ್ ಜೆಟ್ ಹಾಗೂ 120 ಕ್ಕೂ ಹೆಚ್ಚು ಎರಡು ಇಂಜಿನ್ ಗಳನ್ನು ಹೊಂದಿರುವ ಫೈಟರ್ ಏರ್ ಕ್ರಾಫ್ಟ್ ಇರಲಿವೆ.

ಸೇನೆಯನ್ನು ಆಧುನಿಕರಣಗೊಳಿಸಲು ತಗುಲುವ ಅಂದಾಜು ವೆಚ್ಚದ ಬಗ್ಗೆ ವರದಿ ನೀಡುವಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಕೇಳಿದ್ದು, ಇದನ್ನು 2012-2027 ವರೆಗಿನ ಲಾಂಗ್ ಟರ್ಮ್ ಇಂಟಿಗ್ರೇಟೆಡ್ ಪರ್ಸ್ಪೆಕ್ಟಿವ್ ಪ್ಲ್ಯಾನಿಂಗ್ ಎಂದು ಗುರುತಿಸಲಾಗಿದೆಯಂತೆ. ಶಾಂತಿಯುತ ಪ್ರದೇಶಗಳಲ್ಲಿ ಕೆಲವೊಂದು ಕಾರ್ಯಾಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಲು ಯೋಚಿಸಲಾಗಿದೆ. ಅಷ್ಟೇ ಅಲ್ಲದೇ, ಸಾಧ್ಯವಿರುವ ಪ್ರದೇಶಗಳಲ್ಲಿ ಜನರ ಬದಲು ಸ್ಮಾರ್ಟ್ ಸಿಸ್ಟಂ ಗಳನ್ನು ನಿಯೋಜಿಸಲು ರಕ್ಷಣಾ ಇಲಾಖೆ ಚಿಂತನೆ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com