ಜೆಡಿಯು ನಾಯಕ ಪವನ್ ವರ್ಮಾ
ಜೆಡಿಯು ನಾಯಕ ಪವನ್ ವರ್ಮಾ

ದ್ವಿಮುಖ ಧೋರಣೆ ನಿಲ್ಲಿಸಿ, ಪಾಕಿಸ್ತಾನದ ಮೇಲೆ ಒತ್ತಡ ಹೇರಿ: ಅಮೆರಿಕಾಗೆ ಜೆಡಿಯು

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತಂತೆ ಅನುಸರಿಸುತ್ತಿರುವ ದ್ವಿಮುಖ ಧೋರಣೆಯನ್ನು ನಿಲ್ಲಿಸಿ, ಪಾಕಿಸ್ತಾನದ ಮೇಲೆ ಒತ್ತಡ ಹೇರುವಂತೆ ಜೆಡಿಯು ವಿಶ್ವಸಂಸ್ಥೆ ಹಾಗೂ ಅಮೆರಿಕಾಗೆ...

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತಂತೆ ಅನುಸರಿಸುತ್ತಿರುವ ದ್ವಿಮುಖ ಧೋರಣೆಯನ್ನು ನಿಲ್ಲಿಸಿ, ಪಾಕಿಸ್ತಾನದ ಮೇಲೆ ಒತ್ತಡ ಹೇರುವಂತೆ ಜೆಡಿಯು ವಿಶ್ವಸಂಸ್ಥೆ ಹಾಗೂ ಅಮೆರಿಕಾಗೆ ಬುಧವಾರ ಆಗ್ರಹಿಸಿದ್ದಾರೆ.

ದಾವೂದ್ ಪಾಕಿಸ್ತಾನದಲ್ಲೇ ತಲೆಮರೆಸಿಕೊಂಡಿದ್ದಾನೆಂದು ಹೇಳಿದ್ದ ಭಾರತವು, ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆಂಬುದಕ್ಕೆ 9 ದಾಖಲೆಗಳನ್ನು ಸಲ್ಲಿಸಿತ್ತು. ಇದರಂತೆ ನಿನ್ನೆ ಅಧಿಕೃತವಾಗಿ ಹೇಳಿಕೆ ನೀಡಿದ್ದ ವಿಶ್ವಸಂಸ್ಥೆಯು ಭಾರತ ಸಲ್ಲಿಸಿದ್ದ 9 ದಾಖಲೆಗಳ ಪೈಕಿ 6 ದಾಖಲೆಗಳು ಸರಿಯಾಗಿವೆ ಎಂದು ಹೇಳಿತ್ತು.

ವಿಶ್ವಸಂಸ್ಥೆಯ ನೀಡಿದ ಹೇಳಿಕೆ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ಜೆಡಿಯು ನಾಯಕ ಪವನ್ ವರ್ಮಾ ಅವರು. ನಮಗೆ ಈಗಾಗಲೇ ತಿಳಿದಿರುವ ವಿಚಾರವನ್ನು ವಿಶ್ವಸಂಸ್ಥೆ ಇದೀಗ ದೃಢೀಕರಿಸಿದೆ. ವಿಶ್ವಸಂಸ್ಥೆಯ ಪ್ರಮಾಣಪತ್ರದಿಂದ ಏನಿದೆ ಪ್ರಯೋಜನ? ದಾವೂದ್ ಪಾಕಿಸ್ತಾನದಲ್ಲಿಯೇ ಇದ್ದಾನೆಂಬುದಕ್ಕೆ ಭಾರತ ಸಾಕಷ್ಟು ದಾಖಲೆಗಳನ್ನು ಒದಗಿಸಿತ್ತು. ದಾವೂದ್ ಉಳಿಯಲು ಪಾಕಿಸ್ತಾನ ಸರ್ಕಾರ, ಇಸಿಸ್ ಮತ್ತು ಪಾಕ್ ಸೇನೆಯು ಸಹಾಯ ಮಾಡಿರುವುದಾಗಿ ತಿಳಿಸಿತ್ತು. ಸತ್ಯವನ್ನು ತಿಳಿಯಲು ವಿಶ್ವಸಂಸ್ಥೆ ಧೀರ್ಘಕಾಲಿಕ ಸಮಯವನ್ನು ತೆಗೆದುಕೊಂಡಿದೆ.

ದಾವೂದ್ ಕುರಿತಂತೆ ವಿಶ್ವಸಂಸ್ಥೆ ಹಾಗೂ ಅಮೆರಿಕಾ ರಾಷ್ಟ್ರವು ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಅನಿಸುತ್ತಿದೆ. ನನಗೆ ಪ್ರಯೋಜನಕ್ಕೆ ಬರುವುದೇ ಆದರೆ, ಕಣ್ಣು ಮುಚ್ಚಿಕೊಂಡು ನಿನಗೆ ಸಹಾಯವನ್ನು ಮಾಡುತ್ತೇನೆಂಬಂತಿದೆ ವಿಶ್ವಸಂಸ್ಥೆಯ ವರ್ತನೆ. ಇದು ಒಂದು ರೀತಿಯಲ್ಲಿ ದೂರದೃಷ್ಟಿಯಿಲ್ಲದ ನೀತಿಯಂತಿದೆ.  ದಾವೂದ್ ಕುರಿತಂತೆ ವಿಶ್ವಸಂಸ್ಥೆ ಅನುಸರಿಸುತ್ತಿರುವ ದ್ವಿಮುಖ ಧೋರಣೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com