ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದನೆ: ಒಲಿಂಪಿಕ್ಸ್ ತಯಾರಿಗೆ ಆಟದ ಮೈದಾನ ಕಲ್ಪಿಸಿದ ಮೋದಿ

ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಭಾರತವನ್ನು ಮಿಂಚುವಂತೆ ಮಾಡಬೇಕೆಂಬುದು ನನ್ನ ಆಸೆ. ಆದರೆ, ನಮಗೆ ಮೈದಾನದ ಸೌಲಭ್ಯವಿಲ್ಲವೆಂದು ವಿದ್ಯಾರ್ಥಿನಿ ಬರೆದಿದ್ದ ಪತ್ರವೊಂದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಂದನೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಮುಂಬೈ: ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಭಾರತವನ್ನು ಮಿಂಚುವಂತೆ ಮಾಡಬೇಕೆಂಬುದು ನನ್ನ ಆಸೆ. ಆದರೆ, ನಮಗೆ ಮೈದಾನದ ಸೌಲಭ್ಯವಿಲ್ಲವೆಂದು ವಿದ್ಯಾರ್ಥಿನಿ ಬರೆದಿದ್ದ ಪತ್ರವೊಂದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಂದನೆ ನೀಡಿದ್ದು, ವಿದ್ಯಾರ್ಥಿಗಳಿಗೆ ಒಲಿಂಪಿಕ್ಸ್ ತಯಾರಿಗಾಗಿ ಆಟದ ಮೈದಾನವೊಂದನ್ನು ಕಲ್ಪಿಸಿದ್ದಾರೆ.

ಸಾಕ್ಷಿ ತಿವಾರಿ ಮೋದಿಯವರಿಗೆ ಪತ್ರ ಬರೆದ ವಿದ್ಯಾರ್ಥಿನಿಯಾಗಿದ್ದು, ಈಕೆ ನವೀ ಮುಂಬೈನ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾಳೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೇಡಿಯೋ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಕಾರ್ಯಕ್ರಮದ ವೇಳೆಯಲ್ಲಿ ದೇಶದ ಜನರು ಬರೆಯುವ ಪತ್ರಗಳನ್ನು ಓದುತ್ತಾರೆಂದು ತಿಳಿದ ಸಾಕ್ಷಿ ತಿವಾರಿ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಳು.

ಪತ್ರದಲ್ಲಿ ತನಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಆಸೆಯಿದೆ. ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮಿನುಗುವಂತೆ ಮಾಡುವುದು ನನ್ನ ದೊಡ್ಡ ಕನಸಾಗಿದೆ. ಆದರೆ, ತಯಾರಿ ನಡೆಸಲು ನಮ್ಮ ಶಾಲೆಯಲ್ಲಿ ಮೈದಾನವಿಲ್ಲ. ಹೀಗಾಗಿ ಒಂದು ಮೈದಾನವನ್ನು ನಿರ್ಮಿಸಿಕೊಡುವಂತೆ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಳು.

ವಿದ್ಯಾರ್ಥಿನಿಯ ಪತ್ರಕ್ಕೆ ಕೂಡಲೇ ಸ್ಪಂದನೆ ನೀಡಿರುವ ಪ್ರಧಾನಿ ಸಚಿವಾಲಯವು, ಇದೀಗ ನವೀ ಮುಂಬೈನ ಸಮೀಪವಿರುವ ಮೈದಾನವೊಂದನ್ನು ವಿದ್ಯಾರ್ಥಿನಿ ವ್ಯಾಸಾಂಗ ಮಾಡುತ್ತಿರುವ ಶಾಲೆಯ ಉಪಯೋಗಕ್ಕೆ ನೀಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಇದೀಗ ಈ ಮೈದಾನವನ್ನು ಶಾಲೆ ಉಪಯೋಗಿಸಿಕೊಳ್ಳುತ್ತಿದೆ ಎಂದು ಶಾಲಾ ಆಡಳತಿ ಮಂಡಳಿ ಹೇಳಿಕೊಂಡಿದೆ.

ಬಾಲಕಿಯ ಮನವಿ ಪತ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿರುವುದಕ್ಕೆ ಸಾಕಷ್ಟು ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ವಿದ್ಯಾರ್ಥಿನಿ ಸಾಕ್ಷಿ ತಿವಾರಿ ಕೂಡ ಮೋದಿಯವರಿಗೆ ಧನ್ಯವಾದ ಹೇಳಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com