ಕೇರಳ ಪೋಲೀಸರ ವಿರುದ್ಧವೇ ಇವೆ 3080 ಕ್ರಿಮಿನಲ್ ಪ್ರಕರಣಗಳು!
ಕೊಚ್ಚಿ: ಕೇರಳ ಪೊಲೀಸರು ದೇಶದಲ್ಲೇ ಅತ್ಯಂತ ಕೆಟ್ಟ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂಬುದು ರಾಷ್ಟ್ರೀಯ ಅಪರಾಧ ದಳ(ಎನ್ ಸಿಆರ್ ಬಿ) ಅಂಕಿ-ಅಂಶಗಳಿಂದ ತಿಳಿದುಬಂದಿದೆ. 2015 ರ ಅಂಕಿ- ಅಂಶಗಳ ಪ್ರಕಾರ ಕೇರಳ ಪೋಲೀಸರ ವಿರುದ್ಧ ಬರೋಬ್ಬರಿ 3080 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
2014 ರಲ್ಲಿ ಕೇರಳ ಪೋಲೀಸರ ವಿರುದ್ಧ 177 ಪ್ರಕರಣಗಳು ದಾಖಲಾಗಿದ್ದರೆ, 2015 ರಲ್ಲಿ 3,080 ಪ್ರಕರಣಗಳು ದಾಖಲಾಗಿರುವುದು ಆತಂಕ ಮೂಡಿಸಿದೆ. ಅಷ್ಟೇ ಅಲ್ಲದೆ 2015 ರಲ್ಲಿ 2,903 ಪ್ರಕರಣಗಳಲ್ಲಿ ಇಲಾಖಾ ತನಿಖೆ ನಡೆಸಲಾಗಿದೆ ಎಂದು ಎನ್ ಸಿ ಆರ್ ಬಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
2014 ರಲ್ಲಿ ಕೇರಳದಲ್ಲಿ ನಡೆದಿದ್ದ 829 ಇಲಾಖಾ ತನಿಖೆಗಳು 2015 ರಲ್ಲಿ 2,903 ಕ್ಕೆ ಏರಿಕೆಯಾಗಿದೆ. ಅಚ್ಚರಿಯೆಂದರೆ ಮಹಾರಾಷ್ಟ್ರದಲ್ಲಿ ಪೋಲೀಸರ ಮೇಲೆ ದಾಖಲಾಗಿರುವ ಪ್ರಕರಣಗಳಿಗಿಂತಲೂ ಎರಡರಷ್ಟು ಪ್ರಕರಣಗಳು ಕೇರಳದಲ್ಲಿ ಪೋಲೀಸರ ವಿರುದ್ಧ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಅಪರಾಧ ದಳದ ಅಂಕಿ ಅಂಶಗಳನ್ನು ಪರಿಶೀಲಿಸಿದ ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ