
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಪತ್ತನ್ ನಗರಲ್ಲಿ ಇಬ್ಬರು ಉಗ್ರರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿರುವುದಾಗಿ ಗುರುವಾರ ತಿಳಿದುಬಂದಿದೆ.
ಪತ್ತನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತಂತೆ ಖಚಿತ ಮಾಹಿತಿ ಪಡೆದಿದ್ದ ಯೋಧರು ಕಾರ್ಯಾಚರಣೆಗಿಳಿದಿದ್ದರು. ಇದರಂತೆ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಬಂಧನಕ್ಕೊಳಗಾದ ಉಗ್ರರಿಂದ ಅಧಿಕಾರಿಗಳು 2 ಎಕೆ 47, ಮದ್ದುಗುಂಡುಗಳು ಮತ್ತು ಗ್ರೆನೇಡ್ ಗಳನ್ನು ವಶಪಡಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಪುಲ್ವಾಮ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದ ಉಗ್ರರು ಪೇದೆಯೊಬ್ಬರನ್ನು ಬಹಳ ಹತ್ತಿರದಿಂದಲೇ ಗುಂಡಿಟ್ಟು ಹತ್ಯೆಮಾಡಿದ್ದರು.
ಖುರ್ಷಿದ್ ಅಹ್ಮದ್ ಮೃತ ಪೇದೆಯೆಂದು ಗುರ್ತಿಸಲಾಗಿತ್ತು. ಕೊಯ್ಲ್ ಗ್ರಾಮದಲ್ಲಿ ನೆಲೆಯೂರಿದ್ದ ಖುರ್ಷಿದ್ ಅವರು ಕರ್ತವ್ಯಕ್ಕೆ ಹಾಜರಾಗುವ ಸಲುವಾಗಿ ಬೆಳಿಗ್ಗೆ 3 ಗಂಟೆ ಸುಮಾರಿಗೆ ಮನೆಯಿಂದ ಹೊರಬಂದಿದ್ದರು. ಈ ವೇಳೆ ಪೇದೆಯ ಎದುರಿಗೇ ಬಂದಿರುವ ಉಗ್ರರು ನೇರವಾಗಿ ಗುಂಡಿಟ್ಟು ಹತ್ಯೆ ಮಾಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement