ಆಂಧ್ರದ ಬ್ಯಾಂಕ್ ನಲ್ಲಿ ಕಾಲ್ತುಳಿತ: ಇಬ್ಬರಿಗೆ ಗಾಯ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯೊಂದರ ಬ್ಯಾಂಕ್ ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಆಂಧ್ರದ ಬ್ಯಾಂಕ್ ನಲ್ಲಿ ಕಾಲ್ತುಳಿತ: ಇಬ್ಬರಿಗೆ ಗಾಯ
ಆಂಧ್ರದ ಬ್ಯಾಂಕ್ ನಲ್ಲಿ ಕಾಲ್ತುಳಿತ: ಇಬ್ಬರಿಗೆ ಗಾಯ
Updated on: 
ವಿಜಯವಾಡ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯೊಂದರ ಬ್ಯಾಂಕ್ ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. 
ಪಾಲಕೊಲ್ಲು ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಸರತಿ ಸಾಲಿನಲ್ಲಿ ನಿಂತಿದ್ದ ಜನರು ಬ್ಯಾಂಕ್ ತೆರೆಯುತ್ತಿದ್ದಂತೆಯೇ ಜನರು ಒಳನುಗ್ಗಿದ ಪರಿಣಾಮ ಕಾಲ್ತುಳಿತ ಉಂಟಾಗಿದ್ದು, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದ್ದಿದ್ದರಿಂದ ಬ್ಯಾಂಕ್ ಸಿಬ್ಬಂದಿಗಳು ವಹಿವಾಟುಗಳನ್ನು ತಕ್ಷಣವೇ ಸ್ಥಗಿತಗೊಳಿಸಿದರು. ನಂತರ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. 
ಆಂಧ್ರಪ್ರದೇಶ ಹಾಗೂ ತೆಲಂಗಾಣ ಜಿಲ್ಲೆಗಳಲ್ಲಿ ಡಿಸೆಂಬರ್ ನ ಸತತ ಮೂರನೇ ದಿನವೂ ಸಹ ಸರ್ಕಾರಿ ನೌಕರರು ಖಾಸಗಿ ಕಂಪನಿಗಳ ನೌಕರರು ವೇತವನ್ನು ವಿತ್ ಡ್ರಾ ಮಾಡಲು ಸಮಸ್ಯೆ ಎದುರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com