'ಅಮ್ಮ' ಸ್ಥಿತಿ ಗಂಭೀರ: ಚೆನ್ನೈ ವಾಹನ ದಟ್ಟಣೆ ಕಳೆದ ವರ್ಷದ ಪ್ರವಾಹಕ್ಕಿಂತಲೂ ಹೆಚ್ಚು

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದಂತೆ ನಗರದಾದ್ಯಂತ ವಾಹನ ದಟ್ಟಣ ತೀವ್ರವಾಗಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದಂತೆ ನಗರದಾದ್ಯಂತ ವಾಹನ ದಟ್ಟಣ ತೀವ್ರವಾಗಿದ್ದು, ಅದು ಕಳೆದ ವರ್ಷದ ಪ್ರವಾಹಕ್ಕಿಂತಲೂ ಹೆಚ್ಚು ಎನ್ನಲಾಗುತ್ತಿದೆ.
'ಅಮ್ಮ'ನ ಸ್ಥಿತಿ ಗಂಭೀರ, ಅಮ್ಮ ಇನ್ನಿಲ್ಲ ಎಂಬ ಕೆಲ ಸುದ್ದಿವಾಹಿನಗಳ ವರದಿ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದ್ದು, ಹಿಂಸಾಚಾರ ಘಟನೆಗಳು ನಡೆಯಬಹುದು ಹಾಗೂ ಮುಂದಿನ ಕೆಲವು ದಿನಗಳ ಕಾಲ್ ತಮಿಳುನಾಡು ಬಂದ್ ಆಗಬಹುದು ಎಂಬ ಭಯದಿಂದ ಜನ ನಿಗದಿಗೂ ಮುನ್ನವೇ ಕಚೇರಿಯಿಂದ ಮನೆಗೆ ತೆರಳುತ್ತಿರುವುದು ಮತ್ತು ತಮ್ಮ ನಿತ್ಯದ ವಸ್ತುಗಳಿಗಾಗಿ ಅಂಗಡಿಗಳಿಗೆ ಧಾವಿಸುತ್ತಿರುವುದರಿಂದ ವಾಹನ ದಟ್ಟಣೆಗೆ ಕಾರಣ ಎನ್ನಲಾಗಿದೆ.
ಕೆಲವು ಸಾಫ್ಟವೇರ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೇಗ ಹೊರಡಿ ಎಂಬ ಸೂಚನೆ ನೀಡಿದ್ದರಿಂದ ಏಕಕಾಲಕ್ಕೆ ಎಲ್ಲರೂ ರಸ್ತೆಗಿಳಿದಿದ್ದು, ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.
ರಾಮಾಪುರಂ ಮತ್ತು ನಂದಮ್ ಬಾಕಂನಲ್ಲಿ ಜನ ದಿನಸಿ ಅಂಗಡಿಗಳಲ್ಲಿ ಮುಗಿಬಿದ್ದಿದ್ದು, ಡಿಎಲ್ಎಫ್ ಪಾರ್ಕ್ ಬಳಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದು ಕಳೆದ ವರ್ಷದ ಪ್ರವಾಹಕ್ಕಿಂತಲೂ ಹೆಚ್ಚು ಎಂದು ವಾಹನ ಸವಾರರು ಹೇಳುತ್ತಿದ್ದಾರೆ.
ನಿಧಾನವಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಳ್ಳುತ್ತಿದ್ದು, ಮದ್ರಾಸ್ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ರಸ್ತೆಗಳು ಸಂಪೂರ್ಣ ಜಾಮ್ ಆಗಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com