ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡ ಮುಂಬೈ ವ್ಯಕ್ತಿ: ಎಟಿಎಸ್ ಶಂಕೆ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡು ಕಾರ್ಯನಿರ್ವಹಿಸುತ್ತಿದ್ದ ಮುಂಬೈ ವ್ಯಕ್ತಿ ಲಿಬಿಯಾದಲ್ಲಿ ನೆಲೆಯೂರಿರುವುದಾಗಿ ಎಟಿಎಸ್ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡು ಕಾರ್ಯನಿರ್ವಹಿಸುತ್ತಿದ್ದ ಮುಂಬೈ ವ್ಯಕ್ತಿ ಲಿಬಿಯಾದಲ್ಲಿ ನೆಲೆಯೂರಿರುವುದಾಗಿ ಎಟಿಎಸ್ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

ತಬ್ರೇಸ್ ಮೊಹಮ್ಮದ್ ತಾಂಬೆ ಬಂಧಿತ ವ್ಯಕ್ತಿಯಾಗಿದ್ದು, ಈತ ಮುಂಬೈನ ಥಾಣೆಯ ಮೂಲದವನಾಗಿದ್ದಾನೆಂದು ತಿಳಿಬುದಂದಿದೆ.

ಠಾಣೆ ಜಿಲ್ಲೆಯ ಮುಂಬ್ರಾದ 28 ವರ್ಷದ ಯುವಕ ತಬ್ರೇಜ್‌ ನೂರ್‌ ಮೊಹಮ್ಮದ್‌ ತಂಬೆ  ಎಂಬಾತ ಐಎಸ್‌ಗೆ  ಸೇರಿರುವುದಾಗಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಶಂಕಿಸಿದೆ.

ಇಸಿಸ್ ಗೆ ಸೇರಲು ನಿರ್ಧರಿಸಿದ್ದ ತಬ್ರೇಸ್ ಮೊಹಮ್ಮದ್ ದೇಶ ತೊರೆದು ಉದ್ಯೋಗಕ್ಕೆಂದು ಈಜಿಪ್ಟ್ ಗೆ ಹೋಗಿದ್ದಾನೆ. ನಂತರ ಅಲ್ಲಿಂದ ಲಿಬಿಯಾದಲ್ಲಿ ನೆಲೆಯೂರಿದ್ದಾನೆ. ನಂತರ ತನ್ನ ಸ್ನೇಹಿತ ಅಲಿ ಎಂಬಾತನೊಂದಿಗೆ ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.

ಇಸಿಸ್ ಗೆ ಸೇರ್ಪಡೆಗೊಂಡ ಬಳಿಕವೂ ತಬ್ರೇಸ್ ಕಳೆದ ವಾರದವರೆಗೂ ತನ್ನ ಕುಟುಂಬಸ್ಥರೊಂದಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿಯೇ ಇದ್ದ. ಈ ಬಗ್ಗೆ ತಬ್ರೇಸ್ ಸಹೋದರ ಎಟಿಎಸ್ ಆಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಸಂಪರ್ಕಿದಲ್ಲಿದ್ದ ವೇಳೆ ತಬ್ರೇಸ್ ತನ್ನೊಂದಿಗೆ ಬಂದು ಸೇರ್ಪಡೆಗೊಳ್ಳುವಂತೆ ಕುಟುಂಬಸ್ಥರಿಗೆ ಹೇಳಿದ್ದಾರೆ. ಈ ವೇಳೆ ತಪ್ಪು ದಾರಿಗೆ ಹೋಗುತ್ತಿದ್ದು, ಕೂಡಲೇ ಭಾರತಕ್ಕೆ ಬಂದು ಬಿಡುವಂತೆ ಸಹೋದರ ಮನವಿ ಮಾಡಿಕೊಂಡಲೂ ಇದನ್ನು ತಿರಸ್ಕರಿಸಿದ ಆತ, ನಾನಿರುವ ಸ್ಥಳಕ್ಕೆ ಬಂದರೆ ಜೀವನ ಪೂರ್ತಿ ಸಂತೋಷವಾಗಿರಬಹುದು ಎಂದು ಹೇಳಿದ್ದಾನೆ. ಅಲ್ಲದೆ, ಇಸಿಸ್ ಸಂಘಟನೆಯಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆಂದು ಅಧಿಕಾರಿಗಳು ಹೇಳಿದ್ದಾರೆ.

ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ತಬ್ರೇಸ್ ಮೂರು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ. ಉದ್ಯೋಗಕ್ಕಾಗಿ ಕಳೆದ 5 ವರ್ಷಗಳಿಂದಲೂ ಇತರೆ ದೇಶಗಳಿಗೆ ಭೇಟಿ ನೀಡುತ್ತಿದ್ದ. ಸೌದಿ ಅರೇಬಿಯಾದ ರಿಯಾಧ್ ನಲ್ಲಿ ಕೆಲಸ ಮಾಡುತ್ತಿದ್ದಾ ಅಲಿ ಎಂಬಾತ ತಬ್ರೇಸ್ ಗೆ ಪರಿಚಯವಾಗಿದ್ದು, ಈತನಿಂದ ತಬ್ರೇಸ್ ಇಸಿಸ್ ಗೆ ಸೇರ್ಪಡೆಗೊಂಡಿದ್ದಾನೆಂದು ಅಧಿಕಾರಿಗಳು ಶಂಕಿಸಿದ್ದಾರೆ.

ಅಲಿ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ಅಲಿ ಭಾರತದವನೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪ್ರಸ್ತುತ ತಿಳಿದುಬಂದಿರುವ ಮಾಹಿತಿ ಪ್ರಕಾರ, ಈ ಹಿಂದೆ ಅಲಿ ಭಾರತಕ್ಕೆ ಭೇಟಿ ನೀಡಿದ್ದ ಎಂಬ ಮಾಹಿತಿ ಇದೆ ಎಂದು ಮುಂಬೈ ಎಟಿಎಸ್ ಮುಖ್ಯಸ್ಥ ಅತುಲ್'ಚಂದ್ರ ಕುಲಕರ್ಣಿಯವರು ಹೇಳಿದ್ದಾರೆ.

ತಬ್ರೇಸ್ ಇದೀಗ ಲಿಬಿಯಾದಲ್ಲಿರುವುದಾಗಿ ತಿಳಿದುಬಂದಿದ್ದು, ಆತನ ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com